ಪಕ್ಷ ಸಂಘಟನೆಗಾಗಿ ಜಿಲ್ಲಾ ಪ್ರವಾಸ; ಹೊಸ ಕಾರು ಖರೀದಿಸಿದ BSY

ಮಂಗಳವಾರ, 24 ಆಗಸ್ಟ್ 2021 (12:37 IST)
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷ ಸಂಘಟನೆಯತ್ತ ಗಮನಕೊಡಲು ನಿರ್ಧರಿಸಿದ್ದು, ಕೆಲ ದಿನಗಳಲ್ಲೇ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಾರು ಖರೀದಿಸಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ನಿನ್ನೆಯಷ್ಟೇ ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿರುವ ಯಡಿಯೂರಪ್ಪ ಇನ್ನೊಂದು ತಿಂಗಳಲ್ಲಿ ವಾರಕ್ಕೊಂದು ಜಿಲ್ಲೆಯಂತೆ ಜಿಲ್ಲಾವಾರು ಪ್ರವಾಸ ಕೈಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಾರು ಖರೀದಿಸಿದ್ದಾರೆ ಎನ್ನಲಾಗಿದೆ.
1 ಕೋಟಿ ಬೆಲೆ ಬಾಳುವ ದುಬಾರಿ ಟೊಯೋಟಾ ವೆಲ್ ಫೈರ್ ಕಾರನ್ನು ಯಡಿಯೂರಪ್ಪ ಖರೀದಿಸಿದ್ದು, ಬಿಳಿ ಬಣ್ಣದ KA 05-ND-4545 ನೋಂದಣಿ ಸಂಖ್ಯೆ ಕಾರು ಇದಾಗಿದೆ. ವಿದೇಶದಿಂದ ವಾಪಸ್ ಆದ ಬಿ.ಎಸ್.ವೈ. ಅವರನ್ನು ಬರಮಾಡಿಕೊಳ್ಳಲು ಅವರ ಸಿಬ್ಬಂದಿ ನಿನ್ನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಕಾರು ತಂದಿದ್ದು, ಎಲ್ಲರ ಗಮನ ಸೆಳೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ