ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು : ಬೊಮ್ಮಾಯಿ

ಶನಿವಾರ, 21 ಜನವರಿ 2023 (13:16 IST)
ಗ್ರಾಮೀಣ ಆರ್ಥಿಕತೆ ಸುಧಾರಿಸಲು ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು. ಭೂಮಿಯಿಂದ ಸಾಲದ ಅನುಪಾತವನ್ನು ಯಾರೂ ನಿರ್ವಹಣೆ ಮಾಡಿಲ್ಲ. 20 ಸಾವಿರ ನೀಡಬೇಕಾದರೆ 7 ರಿಂದ 8 ಸಾವಿರ ನೀಡಲಾಗುತ್ತದೆ.

ನಿಖರವಾಗಿ ಸಾಲ ನೀಡಿದರೆ ರೈತ ಮಾರವಾಡಿಗಳ ಎದುರು ಕೈ ಚಾಚುವುದನ್ನು ನಿಲ್ಲಿಸುತ್ತಾನೆ. ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರಿಗೆ ಒತ್ತಾಯವನ್ನು ಮಾಡಿದ್ದು, ರಚನೆ ಬದಲಾಯಿಸಿ, ನಬಾರ್ಡ್ ಈ ಸಾಲ ಪದ್ದತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.

ಈ ಕೆಲಸಗಳಾದರೆ ರೈತರ ಬದುಕಿಗೆ ನಿಶ್ಚಿತತೆಯನ್ನು ತರಬಹುದು. ರಾಜ್ಯ ಸರ್ಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ನೀಡಿದ್ದು, 3 ಲಕ್ಷ ಹೊಸ ರೈತರಿಗೆ ಸಾಲ ನೀಡಿರುವುದು ದಾಖಲೆ. ರೈತಶಕ್ತಿ ಯೋಜನೆ 10 ದಿನಗಳ ಕಾಲದಲ್ಲಿ ಪ್ರಾರಂಭಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರುಪ್ರಾರಂಭಿಸಲಾಗಿದೆ.

 
ನಮ್ಮ ರಾಜ್ಯ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದರಿಂದ ಹಾಗೂ ಸೋಲಾರ್ ಕೃಷಿ ಪಂಪ್ಸೆಟ್ಗಳಿಗೆ ನರೇಂದ್ರ ಮೋದಿಯವರ ಸರ್ಕಾರ ಯೋಜನೆಗಳನ್ನು ನೀಡಿ ದೊಡ್ಡ ಪ್ರಾಮಾಣದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ರೈತ ವಿದ್ಯಾ ನಿಧಿಯಡಿ 11 ಲಕ್ಷ ರೈತರ ಮಕ್ಕಳು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ