ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

ಗುರುವಾರ, 3 ಮಾರ್ಚ್ 2022 (18:36 IST)
ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾ ಆರೋಪಿಸಿದೆ.
ಖಾರ್ಕಿವ್‍ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿರುವಾಗ ಉಕ್ರೇನ್ ಪಡೆಗಳು ಭಾರತೀಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಬ್ರೀಫಿಂಗ್‍ನಲ್ಲಿ ತಿಳಿಸಿದೆ.ಈ ಕುರಿತಂತೆ ಮಾತನಾಡಿದ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್, ನಮ್ಮ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಖಾರ್ಕಿವ್‍ನಲ್ಲಿ, ಉಕ್ರೇನಿಯನ್ ಅಧಿಕಾರಿಗಳು ಉಕ್ರೇನಿಯನ್ ಪ್ರದೇಶವನ್ನು ತೊರೆದು ಬೇರೆಡೆಗೆ ಹೋಗಲು ಪ್ರಯತ್ನಿಸಿದ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಬಲವಂತವಾಗಿ ಬಂಧಿಸುತ್ತಿದ್ದಾರೆ.
ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಮತ್ತು ಭಾರತದ ಕಡೆಯವರು ಪ್ರಸ್ತಾಪಿಸಿದಂತೆ ಅವರನ್ನು ತಮ್ಮ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ರಷ್ಯಾದ ಪ್ರದೇಶದಿಂದ ಮನೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
ಮತ್ತೊಂದೆಡೆ ಉಕ್ರೇನ್ ಎಂಎಫ್‍ಎ ಕೂಡ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳ ವಿದ್ಯಾರ್ಥಿಗಳನ್ನು ರಷ್ಯಾ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ