ಕಾಂಗ್ರೆಸ್ - ಬಿಜೆಪಿ ನಡುವೆ ಶುರುವಾಯ್ತು ಕೇಸರಿಕರಣ v/s ಕಾಂಗ್ರೇಸ್ಸಿಕರಣ ಫೈಟ್..!

ಗುರುವಾರ, 25 ಮೇ 2023 (18:38 IST)
ರಾಜ್ಯ ರಾಜಕಾರಣದಲ್ಲಿ ಆಢಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದೆ. ಕಾಂಗ್ರೆಸ್ ಗೆ ಸರ್ಕಾರ ರಚನೆಯಾದ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಮೇಲೆ ಸಭೆ ಮಾಡಿದ್ದು  ಅಧಿಕಾರಗಳ ಸಭೆ ನಡೆಸಿ ಫುಲ್ ಕ್ಲಾಸ್ ತಗೊಂಡಿದ್ದಾರೆ. ಸದ್ಯ ಎರಡು ಪಕ್ಷಗಳ ನಾಯಕರ ನಡುವೆ ಮತ್ತೆ ಕೇಸರಿಕರಣ ಎಂಟ್ರಿಯಾಗ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಫುಲ್ ಬ್ಯುಸಿಯಾಗಿದ್ದಾರೆ. ವಿವಿಧ ಇಲಾಖೆಗಳ ಹಿರಿಯ ಅಧಿಕಾರಗಳ ಸಭೆಗಳನ್ನ ಮಾಡಿ ಲೆಫ್ಟ್ ರೈಟ್ ತಗೊಂಡಿದ್ದಾರೆ. ಹಿಂದಿನ ಸರ್ಕಾರದ ಪರ ಕೆಲಸ ಮಾಡಿದ್ದಿರಾ ಅಂತಾ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಸಿಎಂ ಅಂಡ್ ಡಿಸಿಎಂ.. ಈ ವಿಚಾರವಾಗಿ ಆಢಳಿತ ಪಕ್ಷ ಹಾಗೂ ವಿಪಕ್ಷವಾದ ಬಿಜೆಪಿ ನಾಯಕರ ನಡುವೆ ದೊಡ್ಡ ವಾರ್ ಶುರುವಾಗಿದೆ.. ಜೊತೆಗೆ ಕೇಸರಿಕರಣ ರಾಜಕೀಯಕ್ಕೆ ಕಡಿವಾಣ ಹಾಕ್ತಿವಿ ಅಂತಾ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿರುವ ಕೆಲ ನಾಯಕರ ವಿರುದ್ದ ಕೇಸರಿ ಪಡೆಯ ನಾಯಕರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಕಾರಿಗಳಿಗೆ ಖಡಕ್ ವಾರ್ನಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬೊಮ್ಮಾಯಿ, ಅಧಿಕಾರಿಗಳಿಗೆ ಸೂಚನೆ ಕೊಡಲು ಸ್ವಾತಂತ್ರವಿದೆ. ಸಿಎಂ ಡಿಸಿಎಂ ಕೇಸರೀಕರಣ ಮಾಡಲು ಬಿಡಲ್ಲ ಅಂತ ಹೇಳ್ತಿದ್ದಾರೆ. ನಮ್ಮ ಪೋಲೀಸರಿಗೆ ದೇಶದಲ್ಲೇ ಹೆಸರಿದೆ.‌ಪೋಲೀಸರ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಅವರು ಯಾವತ್ತು ಕೇಸರೀಕರಣ ಮಾಡಿಲ್ಲ.ಇದೆಲ್ಲ ಕಾಂಗ್ರೆಸ್ ನಾಯಕರ ಭ್ರಮೆ. ಎಸ್ ಡಿ ಪಿ‌ಐ, ಪಿಎಫ್ ಐ ಸೇರಿದಂತೆ ಸಮಾಜ ಘಾತಕ ಸಂಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ  ಹೇಳಬೇಕು.. ಜೊತಗೆ ಎಲ್ಲಿಯೂ ನೈತಿಕ ಪೋಲೀಸ್ ಗಿರಿ ನಡೆದಿಲ್ಲ, ಈ ರೀತಿ ಹೇಳಿ, ಪೋಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಆಗುತ್ತಿದೆ ಅಂತಾ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ರು ಮಾಜಿ‌ ಸಿಎಂ ಬೊಮ್ಮಾಯಿ..

 ಪೊಲೀಸ್ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ನಿನ್ನೆಯ ಸಭೆಯಲ್ಲಿ ಪೊಲೋಸರ ಬಗ್ಗೆ ಸಿಎಂ ಡಿಸಿಎಂ ಮಾತನಾಡಿರೋದನ್ನ ನೋಡುದ್ರೆ ಇಡೀ ಪೊಲೀಸನ್ನ ಕಾಂಗ್ರೇಸ್ಸಿಕರಣ ಮಾಡುವಂತಹ ಪ್ರಯತ್ನದ ಹುನ್ನಾರ ಮಾಡುವಂತಿದೆ.ತಮ್ಮ ಮೂಗಿನ ನೇರಕ್ಕೆ ಪೊಲೀಸ್ ನಡಬೇಕು ಅಂತ ಮಾಡ್ತಿದ್ದಾರೆ.. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಮೇಲೆ ಕೇಸರಿಕರಣ  ವಿಚಾರ ಮಾತಾಡ್ತಿದ್ದಾರೆ ಇದ್ರಿಂದ  ಯಾವ ಸಮುದಾಯವನ್ನ ತೃಷ್ಟಿಕರಣ ಮಾಡೋದಕ್ಕೆ ಅನ್ನೊದು ಗೊತ್ತಾಗ್ತಿದೆ ಅಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ್ರು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ.

ಇನ್ನೂ ಮಾಜಿ ಗೃಹ ಸಚಿವರ ಹೇಳಿಕೆ ಕೌಂಟರ್ ನೀಡಿದ  ಸಚಿವ ಪ್ರಿಯಾಂಕ ಖರ್ಗೆ, ಇಡೀ ಪೊಲೀಸ್ ಇಲಾಖೆಯನ್ನ ಕೇಸರೀಕರಣ ಮಾಡಲು ಹೊರಟಿದ್ದು ಬಿಜೆಪಿ ಹೀಗಾಗಿ  ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.ಕಾಂಗ್ರೆಸ್ಸೀಕರಣ ಅಂದ್ರೆ ಬಸವ ತತ್ವ,ಗುರು ನಾರಾಯಣ ತತ್ವ,ಸಂವಿಧಾನವನ್ನ ಅನುಷ್ಠಾನಕ್ಕೆ ತರುವುದು ಕಾಂಗ್ರೆಸ್ಸೀಕರಣ ನಾಗಪುರದಿಂದ ಆದೇಶ ಮಾಡಿಸಿಕೊಂಡು ಬರುವುದಿಲ್ಲ ಎಂದು ಪರೋಕ್ಷವಾಗಿ ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸಿದ್ರು.ಬಿಜೆಪಿಯ ಪಠ್ಯಪುಸ್ತಕ ಪರಿಷ್ಕರಣೆ,ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಎಲ್ಲವನ್ನೂ ಮತ್ತೊಮ್ಮೆ ವಾಪಸ್ ತಂದು ಪರಿಷ್ಕರಣೆ ಮಾಡೇ ಮಾಡ್ತೀವಿ ಅಂತಾ ನೇರವಾಗಿ ಎಚ್ಚರಿಕೆ ನೀಡಿದ್ರು ಸಚಿವ ಪ್ರಿಯಾಂಕ ಖರ್ಗೆ

 ರಾಜ್ಯ ರಾಜಕೀಯದಲ್ಲಿ ಕೇಸರಿಕರಣ ವರ್ಸಸ್ ಕಾಂಗ್ರೆಸ್ಸೀಕರಣ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಪ್ರಮುಖ ಅಸ್ತ್ರ ಆಗುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲಾ.. ಮೂರು ದಿನಗಳ ಕಾಲ ನಡೆದ ವಿಶೇಷ ಅಧಿವೇಶನದಲ್ಲಿ ಸದಸ್ಯರೆಲ್ಲಾ ಪ್ರಮಾಣ ವಚನ ಸ್ವೀಕರಿಸದ್ದು, ಸದ್ಯದಲ್ಲೇ ಸಚಿವ ಸಂಪುಟ ರಚನೆಯಾಗೋದಕ್ಕೆ ಸಿದ್ದತೆಯಲ್ಲಿದ್ದಾರೆ ಕೈ ನಾಯಕರು. ಇದೆಲ್ಲಾ ಮುಗಿದ ನಂತರ ಕೇಸರಿಕರಣ ವರ್ಸಸ್ ಕಾಂಗ್ರೆಸ್ಸೀಕರಣ ವಿಚಾರ ಯಾವ ಮಟ್ಟಕ್ಕೆ ತಲುಪುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ