ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಫಾಸ್ಟ್ ಟ್ರ್ಯಾಕ್ ನೋಂದಣಿಗೆ ಉತ್ತಮ ಸ್ಪಂದನೆ..!

ಗುರುವಾರ, 25 ಮೇ 2023 (16:49 IST)
ಕೆಸಿ ಜನರಲ್ ಆಸ್ಪತ್ರೆಯಲ್ಲಿ OPD ಟೋಕನ್ ಪಡೆಯಲು ರೋಗಿಗಳು ಜನ ನಿತ್ಯ ಪರದಾಡ್ತಿದ್ರು. ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ಸುಸ್ತಾಗ್ತಿದ್ರು. ಆದ್ರೆ ಇನ್ಮುಂದೆ  OPD ಟೋಕನ್ ಪಡೆಯಲು ಕಾಯಬೇಕಿಲ್ಲ.ಸರ್ಕಾರಿ ಆಸ್ಪತ್ರೆಗಳಲ್ಲಿ OPD ಟೋಕನ್ ಪಡೆಯಲು ರೋಗಿಗಳು ಗಂಟೆಗಟ್ಟಲೆ ಕ್ಯೂನಲ್ಲೇ  ನಿಲ್ಲುತ್ತಿದ್ರು. ಈ ಸಮಸ್ಯೆಗಳನ್ನು ಗಮನಿಸಿ ಆರೋಗ್ಯ ಇಲಾಖೆ ಘಂಟೆಗಟ್ಟಲೇ ನಿಲ್ಲದೇ, ಜಸ್ಟ್ ಎ ಮಿನಿಟ್ ಗಳಲ್ಲೇ ಟೋಕನ್ ಪಡೆಯಲು ಯೋಜನೆಯನ್ನು ರೂಪಿಸಿತ್ತು , ಹೌದು ಇಕ ಕೇರ್  ಆ್ಯಪ್ ನಲ್ಲಿ ನೋಂದಣಿಯಾಗಿ, ಆಸ್ಪತ್ರೆಯಲ್ಲಿರುವ ಫಾಸ್ಟ್ ಟ್ರ್ಯಾಕ್ ನ್ನು ಸ್ಕ್ಯಾನ್ ಮಾಡಿದ್ರೆ ಸಾಕು, ಕ್ಯೂ ನಲ್ಲಿ ನಿಲ್ಲದೇ ಡೈರೆಕ್ಟ್ ಆಗಿ, OPD ಟೋಕನ್ ಪಡೆಯಬಹುದಾಗಿತ್ತು . ಇದರಿಂದಾಗಿ ಜನ ಟೋಕನ್ ಪಡೆಯಲು ಗಂಟೆಗಟ್ಟಲೆ ಕ್ಯೂ ನಲ್ಲಿ ನಿಲ್ಲುವುದು ತಪ್ಪುತ್ತಿದ್ದು ದಿನದಿಂದ ದಿನಕ್ಕೆ ಆನ್ ಲೈನ್ ಸ್ಕ್ಯಾನ್ ಮೂಲಕ OPD ಸ್ಲಿಪ್ ಪಡೆಯುವ ರೋಗಿಗಳ ಸಂಖ್ಯೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೆಚ್ಚಾಗಿದ್ದುಇಂದು ಆರೋಗ್ಯ ಇಲಾಖೆ ಈ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯ ಹೊಸ ಆಪ್ಡೇಟ್ ಗೆ ಚಾಲಾನೆ ನೀಡಿದ್ದಾರೆ .

ಇನ್ನೂ ನಿತ್ಯ ಆಸ್ಪತ್ರೆಗೆ 1 ಸಾವಿರಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗೆ ಬರ್ತಿದ್ರು. ಕ್ಯೂ ದೊಡ್ಡದಾಗಿ, ಘಂಟೆಗಟ್ಟಲೆ ನಿಲ್ತಿದ್ರು. ಸದ್ಯ ಪ್ರತಿದಿನ ಕೆಸಿ ಜನರಲ್  ಆಸ್ಪತ್ರೆಯಲ್ಲಿ 800 ಕ್ಕೂ ಹೆಚ್ಚು ಜನ ಈಗ ಇಕ ಕೇರ್ ಮೂಲಕ ನೋಂದಣಿ ಮಾಡಿಕೊಂಡು,   ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗೀ ಆರೋಗ್ಯ ಇಲಾಖೆಯ ಮುಖ್ಯ ಆಯುಕ್ತರು ಡಾ.ರಂದೀಪ್ ಹಾಗೂ ಆರ್ ಎಂ ಓ ಇಂದಿರಾ ಆರ್ ಕಬಾಡೆ ನೇತೃತ್ವದಲ್ಲಿ ಮೆಡಿಸಿನ್ ಸ್ಕ್ರಿಪ್ಟ್, ಎಕ್ಸ್ ರೆ ರೆಪೋರ್ಟ್ ಹಾಗೂ ರೋಗಿಗೆ ಸಂಭಂದ ಪಟ್ಟ ಎಲ್ಲಾ ಡೀಟೆಲ್ಸ್ ಗಳನ್ನು ಮೊಬೈಲ್ ನಲ್ಲೆ ನೋಡುಲು ಈ ಫಾಸ್ಟ್ ಟ್ರ್ಯಾಕ್ ಕ್ಯೂರ್ ನಲ್ಲಿ ಮಾಡಿದಾ ಹೊಸ ಆಪ್ಡೇಟ್ ಗೆ ಚಾಲಾನೆ ನೀಡಿದ್ರು.ಓಟ್ನಲಿ ಸರ್ಕಾರದ ಮಾನ್ಯತೆ ಪಡೆದಿರುಯವ ಇ ಕೇರ್ ಆ್ಯಪ್ ನಲ್ಲಿ ಒಮ್ಮೆ ರಿಜಿಸ್ಟರ್ ಮಾಡಿಕೊಂಡ್ರೆ, ಒಂದೇ ಐಡಿ ಮೇಲೆ ಐದು ಜನ ತೋರಿಸಿಕೊಳ್ಳಬಹುದು, ಇನ್ನೂ ಈ ಹೊಸ ಆಪ್ಡೇಟ್ ಜನರಿಗೆ ಇನ್ನಷ್ಟೂ ಉಪಯೋಗವಾಗಲಿರುವುದು ಅಂತೂ ನಿಜ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ