ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮ ಪ್ರಾರಂಭ
ಮಂಗಳವಾರ, 20 ಡಿಸೆಂಬರ್ 2022 (20:05 IST)
ಸ್ಯಾಮ್‌ಸಂಗ್ ಆರ್&ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರಿನ ಇಂಜಿನಿಯರುಗಳು ಉದ್ಯಮ ಮತ್ತು ಶೈಕ್ಷಣಿಕ ವಲಯದಲ್ಲಿನ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ ಸಿಐಟಿಯಲ್ಲಿನ ಸಿಬ್ಬಂದಿಗೆ ಮಾರ್ಗದರ್ಶನ ನೀಡಲಿದ್ದಾರೆ
ಬೆಂಗಳೂರು, ಭಾರತ – ಡಿಸೆಂಬರ್ 19, 2022 – ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ನಂತಹ ಭವಿಷ್ಯದ ತಂತ್ರಜ್ಞಾನ ಡೊಮೇನ್‌ಗಳಲ್ಲಿ ಯುವಕರಿಗೆ ತರಬೇತಿ ನೀಡಲು ಬೆಂಗಳೂರಿನಲ್ಲಿ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಯಲ್ಲಿ ಸ್ಯಾಮ್‌ಸಂಗ್ ಇನ್ನೋವೇಸನ್ ಕ್ಯಾಂಪಸ್ ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ಆರ್&ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರು (ಎಸ್‌ಆರ್‌ಐ-ಬಿ) ಉದ್ಘಾಟಿಸಿದೆ. ಈ ಉಪಕ್ರಮವು, ಭಾರತ ಸರ್ಕಾರದ #ಡಿಜಿಟಲ್‌ಇಂಡಿಯಾ ಧ್ಯೇಯಕ್ಕೆ ಸ್ಯಾಮ್‌ಸಂಗ್ ಇಂಡಿಯಾದ ಬದ್ಧತೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.
ಸಿಐಟಿ ತರಗತಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ಸುಧಾರಿತ ತಂತ್ರಜ್ಞಾನ ತರಬೇತಿಯನ್ನು ಪಡೆಯುತ್ತಾರೆ ಮತ್ತು ಮಶಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ನಂತಹ ಡೊಮೇನ್‌ಗಳಲ್ಲಿ ಪ್ರಾಜೆಕ್ಟ್‌ಗಳನ್ನು ಮಾಡಲಿದ್ದಾರೆ ಮತ್ತು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧವಾಗಿಸಲಿದ್ದಾರೆ. ತಂತ್ರಜ್ಞಾನದ ಅಳವಡಿಕೆಯ ಮೂಲಕ, ಪ್ರಾಥಮಿಕ ಸಾಫ್ಟ್‌ವೇರ್ ಕೌಶಲ್ಯಗಳು ಮತ್ತು ಸುಧಾರಿತ ಸಾಮರ್ಥ್ಯಗಳು ಇರಲಿದ್ದು, ಭಾಗವಹಿಸಿದವರು ವೃತ್ತಿಪರರಾಗಿ ಬೆಳೆಯುವುದಕ್ಕೆ ಅನುವು ಮಾಡಿಕೊಡುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ.
ಇದರ ಜೊತೆಗೆ, ಉದ್ಯಮ ಮತ್ತು ಶೈಕ್ಷಣಿಕ ವಲಯದಲ್ಲಿನ ಅಂತರವನ್ನು ಕಡಿಮೆ ಮಾಡಲು ಎಸ್‌ಆರ್‌ಐ-ಬಿ ಇಂಜಿನಿಯರುಗಳು ಸಿಐಟಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಎಸ್‌ಆರ್‌ಐ-ಬಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೋಹನ್ ರಾವ್ ಗೋಲಿ ಮತ್ತು ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಮುಖ್ಯಸ್ಥ ಡಿ.ಕೆ ಮೋಹನ್ ಸಿಐಟಿಯಲ್ಲಿ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇವರ ಜೊತೆಗೆ ಇಸ್ರೋ ವಿಜ್ಞಾನಿ ಮತ್ತು ದಿ ಇನ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ (ಭಾರತ), ಏರೋಸ್ಪೇಸ್ ಇಂಜಿನಿಯರಿಂಗ್ ಡಿವಿಷನ್ ಬೋರ್ಡ್‌ನ ಚೇರ್ಮನ್ ಪದ್ಮಶ್ರೀ ಪ್ರೊ. ಆರ್ ಎಂ ವಸಗಮ್ ಹಾಜರಿದ್ದರು. ಇತರ ಅತಿಥಿಗಳೆಂದರೆ ಎಸ್‌ಆರ್‌ಐ-ಬಿ ಮುಖ್ಯ ಎಚ್‌ಆರ್ ಸಂಜೀವ್ ಪ್ರಸಾದ್, ಎಸ್‌ಆರ್‌ಐಬಿ ಟೆಕ್ ಸ್ಟ್ರಾಟಜಿ ಮುಖ್ಯಸ್ಥ ಶ್ರೀಮನು ಪ್ರಸಾದ್, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯುಶನ್‌ಗಳ ಸಿಇಒ ನಿತಿನ್ ಮೋಹನ್ ಮತ್ತು ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಿನ್ಸಿಪಲ್ ಡಾ. ಜಿ. ಇಂದುಮತಿ ಹಾಜರಿದ್ದರು.
“ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ಗುರಿಯು ಯುವಕರಿಗೆ ಶಿಕ್ಷಣ ನೀಡುವ ಮೂಲಕ ಭಾರತದ ಬೆಳವಣಿಗೆಗೆ ಕೊಡುಗೆ ನೀಡುವುದಾಗಿದೆ. ಸಿಐಟಿಯಲ್ಲಿ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಅನ್ನು ಉದ್ಘಾಟನೆ ಮಾಡುತ್ತಿರುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಇದು ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ ಅವರ ಡಿಜಿಟಲ್ ಸಾಕ್ಷರತೆ, ಕಲಿಕೆ ಸಾಮರ್ಥ್ಯಗಳು, ಕ್ರಿಯಾಶೀಲತೆ ಮತ್ತು ಕಲ್ಪನೆಯನ್ನೂ ಸುಧಾರಿಸುತ್ತದೆ. ಆದರೆ, ಭವಿಷ್ಯದ ತಂತ್ರಜ್ಞಾನ ವಲಯಗಳಲ್ಲಿ ಅವರಿಗೆ ಅವಕಾಶಗಳನ್ನೂ ಸೃಷ್ಟಿಸುತ್ತದೆ. ಇದು ಭವಿಷ್ಯದಲ್ಲಿ ನವ ಭಾರತದ ಪ್ರಗತಿ ಕಥೆಯನ್ನು ಪ್ರೋತ್ಸಾಹಿಸಲಿದೆ ಮತ್ತು ಡಿಜಿಟಲ್ ಇಂಡಿಯಾಗೆ ಬೆಂಬಲ ನೀಡುವ ನಮ್ಮ ಬದ್ಧತೆಗೂ ಪೂರಕವಾಗಿರಲಿದೆ” ಎಂದು ಸ್ಯಾಮ್‌ಸಂಗ್ ಆರ್&ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರಿನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೋಹನ್ ರಾವ್ ಗೋಲಿ ಹೇಳಿದ್ದಾರೆ.
“ಸ್ಯಾಮ್‌ಸಂಗ್ ಇನ್ನೊವೇಶನ್ ಕ್ಯಾಂಪಸ್ ಒಂದು ಉತ್ತಮ ಉಪಕ್ರಮವಾಗಿದ್ದು, ಉತ್ತಮ ತಂತ್ರಜ್ಞಾನ ನಾಯಕರನ್ನು ಇದು ಹೊರತರುತ್ತದೆ. ಸ್ಯಾಮ್‌ಸಂಗ್ ಮತ್ತು ಸಿಐಟಿ ಒಟ್ಟಾಗಿ ಅತ್ಯಾಧುನಿಕ ತಂತ್ರಜ್ಞಾನಕ್ಕೆಂದೇ ನಿಗದಿತವಾದ ತರಗತಿಯನ್ನು ರೂಪಿಸಲಿವೆ. ಈ ಮಹತ್ವದ ಉಪಕ್ರಮಕ್ಕೆ ಪಾಲುದಾರನಾಗಲು ಸಿಐಟಿ ಜೊತೆಗೆ ಸ್ಯಾಮ್‌ಸಂಗ್ ಸಹಭಾಗಿತ್ವ ಸಾಧಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಫಲಿತಾಂಶಗಳನ್ನು ನೀಡಲು ನಾವು ತುಂಬಾ ಶ್ರಮಿಸಬೇಕಿದೆ ಮತ್ತು ಇದನ್ನು ಯಶಸ್ವಿಗೊಳಿಸಲು ನಮ್ಮೆಲ್ಲ ಪ್ರಯತ್ನಗಳನ್ನೂ ನಾವು ಮಾಡಲಿದ್ದೇವೆ. ಸ್ಯಾಮ್‌ಸಂಗ್ ಜೊತೆಗೆ ನಮ್ಮ ಸಹಭಾಗಿತ್ವವು ನಮ್ಮ ವಿದ್ಯಾರ್ಥಿಗಳು ಮತ್ತು ಅಂತಿಮವಾಗಿ ಭಾರತದ ಬೆಳವಣಿಗೆಗೆ ಕೊಡುಗೆ ನೀಡುವ ನಮ್ಮ ಸಾಮರ್ಥ್ಯದಲ್ಲಿ ಹೊಸ ಅಧ್ಯಾಯವಾಗಿರಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ಗಳ ಚೇರ್ಮನ್ ಡಿ.ಕೆ.ಮೋಹನ್ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ನೋಂದಣಿಯಾದ ಯುವಕರಿಗೆ ತರಗತಿ ಮತ್ತು ಆನ್‌ಲೈನ್ ತರಬೇತಿಗೆ ಒಳಪಡುತ್ತಾರೆ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಸೇರಿದಂತೆ ಆಯ್ದ ತಂತ್ರಜ್ಞಾನ ವಲಯಗಳಲ್ಲಿ ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲಿದ್ದಾರೆ.
ಮಶಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಬಿಗ್ ಡೇಟಾ ಬಗ್ಗೆ ತಿಳಿವಳಿಕೆ ಇರುವ ಇಂಜಿನಿಯರುಗಳು/ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಿದೆ. ಕೌಶಲ್ಯದಲ್ಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಪಡಿಸುವುದಕ್ಕಾಗಿ ಸ್ಯಾಮ್‌ಸಂಗ್ ಇನ್ನೊವೇಶನ್ ಕ್ಯಾಂಪಸ್ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಎಸ್‌ಆರ್‌ಐ-ಬಿ ಪರಿಣಿತರ ಜೊತೆಗೆ ಕೆಲಸ ಮಾಡಲು ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳಿಗೆ ಒಂದು ಕೇಂದ್ರವಾಗಿ ಸ್ಯಾಮ್‌ಸಂಗ್ ಇನ್ನೊವೇಶನ್ ಕ್ಯಾಂಪಸ್ ಕೆಲಸ ಮಾಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಜ ಜಗತ್ತಿನ ಸವಾಲುಗಳನ್ನು ಪರಿಹರಿಸುವುದು ಮತ್ತು ಅನುಭವದ ಮೂಲಕ ಆಳವಾದ ತಿಳಿವಳಿಕೆಯನ್ನು ಪಡೆಯಲು ಇದು ಅವರಿಗೆ ಅನುವು ಮಾಡುತ್ತದೆ.
ಸಂಸ್ಥೆಯ ಜೊತೆಗೆ ಸಹಭಾಗಿತ್ವದ ಭಾಗವಾಗಿ ಕ್ಯಾಂಪಸ್‌ನಲ್ಲಿ ಡೇಟಾ ಲ್ಯಾಬ್ ಅನ್ನೂ ಸ್ಯಾಮ್‌ಸಂಗ್ ಸ್ಥಾಪಿಸಿದೆ. ಎಸ್‌ಆರ್‌ಐ-ಬಿ ಮಾರ್ಗದರ್ಶನದ ಅಡಿಯಲ್ಲಿ ಎಐ ಮತ್ತು ಡೇಟಾ ಸೈನ್ಸ್ ಪ್ರಾಜೆಕ್ಟ್‌ಗಳಲ್ಲಿ ಲ್ಯಾಬ್ ಸದಸ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕೆಲಸ ಮಾಡಲು ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಸ್ಯಾಮ್‌ಸಂಗ್ ಸೀಡ್ ಲ್ಯಾಬ್ (ಸ್ಟೂಡೆಂಟ್ ಎಕೋಸಿಸ್ಟಮ್ ಫಾರ್ ಇಂಜಿನಿಯರ್ಡ್ ಡೇಟಾ) ಸಹಾಯ ಮಾಡುತ್ತದೆ. ಡೇಟಾ ಕಲೆಕ್ಷನ್, ಡೇಟಾ ಇಂಜಿನಿಯರಿಂಗ್ (ಕ್ಯುರೇಶನ್, ಲೇಬಲಿಂಗ್, ಡೇಟಾ ನಿರ್ವಹಣೆ ಆರ್ಕೈವಲ್ ಇತ್ಯಾದಿ) ಸೇರಿದಂತೆ ಡೇಟಾಗೆ ಎಂಡ್ ಟು ಎಂಡ್ ಪೈಪ್‌ಲೈನ್ ಸ್ಥಾಪಿಸುವ ಮೂಲಕ ಪ್ರಾಜೆಕ್ಟ್‌ಗಳನ್ನು ಜಾರಿಗೊಳಿಸಲು ಲ್ಯಾಬ್ ಯೋಜಿಸಿದೆ.
ಎಸ್‌ಆರ್‌ಐ-ಬಿ ಮತ್ತು ಸಿಐಡಿ ಮಧ್ಯೆ ಸಹಭಾಗಿತ್ವ ಉಪಕ್ರಮವಾಗಿರುವ ಸ್ಯಾಮ್‌ಸಂಗ್ ಸೀಡ್ ಲ್ಯಾಬ್ 1,800 ಚದರಡಿಯಲ್ಲಿ ವ್ಯಾಪಿಸಿದೆ. ಇದರ ಆರಂಭಿಕ ಹಂತದಲ್ಲಿ ಲ್ಯಾಬ್‌ನಲ್ಲಿ ಸರ್ವರ್‌ಗಳು, ಡೇಟಾ ಸ್ವಾಧೀನ ಸಾಧನಗಳು, ಗುಣಮಟ್ಟ ವಿಶ್ಲೇಷಣೆ ಪರಿಕರಗಳು ಮತ್ತು ಇತರೆ ಸಾಧನಗಳು ಇರಲಿವೆ. ಬೃಹತ್ ಪ್ರಮಾಣದಲ್ಲಿ ಡೇಟಾ ಸಂಗ್ರಹಿಸಲು, ಪ್ರಕ್ರಿಯೆಗೊಳಿಸಲು ಮತ್ತು ಆರ್ಕೈವ್ ಮಾಡಲು ಬ್ಯಾಕ್‌ಎಂಡ್ ಮೂಲಸೌಕರ್ಯವನ್ನೂ ಇದು ಹೊಂದಿರಲಿದೆ. ಮುಂದಿನ ಹಂತಗಳಲ್ಲಿ ಲ್ಯಾಬ್‌ನ ಇನ್ ಹೌಸ್ ಸಾಮರ್ಥ್ಯಗಳನ್ನು ವಿಸ್ತರಿಸಿದ 3ಡಿ ಮತ್ತು ಎಆರ್/ವಿಆರ್ ಸೌಲಭ್ಯವನ್ನೂ ಒದಗಿಸಲಾಗುತ್ತದೆ.