ಸ್ಯಾನಿಟೈಸರ್ ಬಳಕೆ ಮಕ್ಕಳ ಕೈಯಲ್ಲಿ ರಾಷ್

ಗುರುವಾರ, 17 ಮಾರ್ಚ್ 2022 (19:34 IST)
ಕೊರೋನಾ ಆತಂಕ  ಹಿನ್ನೆಲೆಯಲ್ಲಿ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಕೂಡ  ಸ್ಯಾನಿಟೈಸರ್  ಬಳಸುವುದು ಕಡ್ಡಾಯ ಮಾಡಲಾಗಿತ್ತು. ಶಾಲಾ ಕಾಲೇಜುಗಳಲ್ಲೂ ಸ್ಯಾನಿಟೈಸ್ ಬಳಸುತ್ತಿದ್ರು. ಕೊರೊನಾ ಈಗ ಕಡಿಮೆಯಾಗಿದ್ದು, ಮಕ್ಕಳು  ಸಂತಸದಿಂದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ, ಆದರೂ ಈಗಲೂ ಕೂಡ ಕೊರೊನಾ  ನಿಯಮದಡಿ ಶಾಲೆಗಳಲ್ಲಿ ಸ್ಯಾನಿಟೈಸರ್ ಬಳಸಲಾಗುತ್ತಿದೆ .
ಆದರೆ ಈಗ ಪದೇ ಪದೇ ಸ್ಯಾನಿಟೈಸರ್ ಬಳಕೆಯಿಂದ 
ಮಕ್ಕಳ ಕೈಗಳಲ್ಲಿ ಹೆಚ್ಚಾಗಿ ರಾಶ್ ಕಾಣಿಸಿಕೊಳ್ಳುತ್ತಿದೆ.ಯಾವುದನ್ನೇ ಆಗ್ಲಿ ಅತೀಯಾಗಿ ಬಳಸಿದ್ರೆ ಅಮೃತ ಕೂಡ ವಿಷ  ಆಗುತ್ತೆ ಅಂತಾರೆ .ಅದೇ ರೀತಿಯಲ್ಲಿ  ಹೆಚ್ಚಾಗಿ ಸ್ಯಾನಿಟೈಸರ್ ಬಳಸುವುದು  ಕೂಡ ಅಪಾಯಕಾರಿಯಾಗಿದೆ .  ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುತ್ತೆ.  ಈ ಅಲ್ಕೋಹಾಲ್ ಕಂಟೆಟ್ ಈಗ ಮಕ್ಕಳಲ್ಲಿ ಈ  ರೀತಿ ರಾಷ್ ಸ್ ಗೆ ಕಾರಣವಾಗುತ್ತಿದೆ. ಆದ್ದರಿಂದ ಮಿತವಾಗಿ ಸ್ಯಾನಿಟೈಸರ್  ಬಳಸೋದು ಉತ್ತಮ ಅಂತಾರೆ ವೈದ್ಯರು 

ಕೊರೊನಾ ಸಂಕಷ್ಟ ಬಹುತೇಕ ಮುಗಿದಿದು , ಸರ್ಕಾರ ಕೂಡ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ. ಜನರು ಕೂಡ ಮೊದಲಿನಂತೆ ತಮ್ಮ ಜೀವನ ಕಟ್ಟಿಕೊಳ್ಳುವ ಕಡೆಗೆ ಗಮನಹರಿಸಿದ್ದಾರೆ. ಇದೀಗ ಕರ್ನಾಟಕ ಟೆಕ್ನಿಕಲ್ ಪ್ಯಾನಲ್ ನಿಂದ ಎಚ್ಚರಿಕೆಯೊಂದು ರವಾನೆಯಾಗಿದೆ.ಈ ವರ್ಷದ ಅಂತ್ಯದವರೆಗೂ ಮಾಸ್ಕ್ ಧರಿಸುವಂತೆ ಎಲ್ಲಾರಿಗೂ ಎಚ್ಚರಿಕೆ ನೀಡಿದ್ದಾರೆ.ಕೊರೊನಾ ಕಡಿಮೆಯಾಗುತ್ತಿದೆ ಎಂದು ಜನರೂ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ .ಕೊರೊನಾ ಕಡಿಮೆಯಾದರೂ ಕೂಡ ಮಾಸ್ಕ್ ಧರಿಸಲೇಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಒಟ್ನಲ್ಲಿ ಹೋದ್ಯಾ ಪಿಶಾಚಿ ಅಂದ್ರೆ   ಬಂದ್ಯಾ ಗವಾಕ್ಷಿ ಅನ್ನುವ ಹಾಗೆ ಕರೋನಾ ಹೋದರೂ ಕೂಡ ಅದರ ಎಫೆಕ್ಟ್ ಮಾತ್ರ ಜನರನ್ನೂ ಇನ್ನು ಬಿಟ್ಟಿಲ್ಲ . ಅಪಾಯಕಾರಿ ವ್ಯೆರಸ್ ವಿರುದ್ಧ ಬಳಸುವ ಸ್ಯಾನಿಟೈಸ್ ನಿಂದಲೂ ಅಪಾಯ ಹೆಚ್ಚಾಗುತ್ತಿದ್ದು ...ಇದರಿಂದ ಪೋಷಕರು ಮಕ್ಕಳಿಗೆ ಸ್ಯಾನಿಟೈಸರ್ ಬಳಸಬೇಕಾ ಬೇಡವಾ? ಎಂಬ ಗೊಂದಲವಾಗಿರುವುದಂತೂ ಸುಳ್ಳಲ್ಲ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ