ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ: ಪೊಲೀಸರ ಕೈ ಸೇರಿದ ಪ್ರಾಥಮಿಕ ವರದಿ

ಬುಧವಾರ, 20 ಏಪ್ರಿಲ್ 2022 (17:08 IST)

ಉಡುಪಿಯ ಲಾಡ್ಜ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರ ಪ್ರಾಥಮಿಕ ವರದಿ ಪೊಲೀಸರ ಕೈ ಸೇರಿದ್ದು, ಅನುಮಾನ ಬಗೆಹರಿಯದ ಕಾರಣ ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷಿಸಲಾಗಿದೆ.

ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ವಿರುದ್ಧ ಶೇ.೪೦ರಷ್ಟು ಕಮಿಷನ್‌ ಆರೋಪ ಮಾಡಿದ್ದ ಸಂತೋಷ್‌ ಪಾಟೀಲ್‌ ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ವಾಟ್ಸಪ್‌ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು ಪ್ರಾಥಮಿಕ ವರದಿ ಕೈ ಸೇರಿದ್ದು, ಈ ವರದಿ ಪ್ರಕಾರ ಸಂತೋಷ್‌ ಆತ್ಮಹತ್ಯೆ ಹಿಂದೆ ಯಾರದೇ ಕೈವಾಡ ಇಲ್ಲ ಎನ್ನಲಾಗಿದೆ.

ಸಂತೋಷ್‌ ಹಣ್ಣಿನ ಜ್ಯೂಸ್ ನಲ್ಲಿ ರಾಸಾಯನಿಕ ಬೆರೆಸಿ ಸೇವಿಸಿದ್ದು, ಜ್ಯೂಸ್‌ ಸೇವಿಸಿದ ಪೇಪರ್‌ ಗ್ಲಾಸ್‌ ಮತ್ತು ಸ್ಟ್ರಾ ಹಾನಿಯಾಗಿಲ್ಲ. ಅಥವಾ ಘಟನಾ ಸ್ಥಳದಲ್ಲಿ ಯಾವುದೇ ಬಲವಂತ ಮಾಡಿದ ಕುರುಹುಗಳು ಇಲ್ಲ.

ಸಂತೋಷ್‌ ಬಾಯಲ್ಲಿ ಕೂಡ ಯಾವುದೇ ಗುರುತು ಇಲ್ಲದ ಕಾರಣ ಸ್ಟ್ರಾ ಬಳಸಿ ಜ್ಯೂಸ್‌ ಸೇವಿಸಿರಬಹುದು. ಆದ್ದರಿಂದ ಸಂತೋಷ್‌ ಆತ್ಮಹತ್ಯೆ ಎಂದು ದೃಢಪಡುತ್ತದೆ. ಆದರೆ ಎಫ್‌ ಎಸ್‌ ಎಲ್‌ ವರದಿ ಬಂದ ನಂತರವೇ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ