ಟಿಕೆಟ್​​ ‘ಕೈ’ತಪ್ಪಿದ್ದಕ್ಕೆ ಸತೀಶ್​ ಕಣ್ಣೀರು

ಸೋಮವಾರ, 10 ಏಪ್ರಿಲ್ 2023 (18:28 IST)
ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಕಣ್ಣೀರು ಪಾಲಿಟಿಕ್ಸ್​ ಸದ್ದು ಮಾಡ್ತಿದೆ. ಬಾಗಲಕೋಟೆಯ ಮುಧೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಆಕಾಂಕ್ಷಿ ಸತೀಶ ಬಂಡಿವಡ್ಡರ ಕಣ್ಣೀರಾಕಿದ್ದಾರೆ. ಟಿಕೆಟ್​ ತನಗೆ ಸಿಗುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಸತೀಶ್​​​ ಬಂಡಿವಡ್ಡರರಿಗೆ ಟಿಕೆಟ್​ ಕೈತಪ್ಪಿದೆ. ಮುಧೋಳ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ R.B. ತಿಮ್ಮಾಪುರಗೆ ಕಾಂಗ್ರೆಸ್​ ಟಿಕೆಟ್​​ ಘೋಷಣೆಯಾಗಿದೆ. ಸತೀಶ ಬಂಡಿವಡ್ಡರನ್ನು ಭೇಟಿ ಮಾಡಲು ಅಭಿಮಾನಿಗಳು ಅವರ ಮನೆಗೆ ತೆರಳಿದಾಗ ಸತೀಶ್​​ ಕಣ್ಣೀರು ಹಾಕಿದ್ದಾರೆ.. ಅಭಿಮಾನಿಗಳ ಎದುರು ಮಂಡಿಯೂರಿ ನಮಸ್ಕರಿಸಿ ಕಣ್ಣೀರು ಹಾಕಿದ್ದಾರೆ.. ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ