ಮಂತ್ರಿ ಸ್ಥಾನ ಸಿಗದಕ್ಕೆ ಮುನಿಸಿಕೊಂಡಿರುವ ಸಹೋದರ ಸತೀಶ್ ಜಾರಕಿಹೊಳಿ ಮನವೊಲಿಸುತ್ತಿರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಒಂದು ವಾರದಲ್ಲಿ ಎಲ್ಲ ಗೊಂದಲಗಳು ಸರಿಯಾಗಲಿವೆ. ಸತೀಶ್ ಜಾರಕಿಹೊಳಿ ಮನವೊಲಿಸಲು ಸಣ್ಣ ಹುಡುಗನಲ್ಲ. ಆತ ಅನುಭವಿ ರಾಜಕಾರಣಿ. ಪಕ್ಷಕ್ಕಾಗಿ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತದೆ. ಕಳೆದ ಬಾರಿ ನಾನು ಹಿರಿಯ ಶಾಸಕನಾಗಿದ್ರು ಸತೀಶ್ ಅವರಿಗೆ ಮಂತ್ರಿ ಪದವಿ ನೀಡಲಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೆ ರಮೇಶ ಜಾರಕಿಹೊಳಿ ಅಂತಹ ಹತ್ತು ಜನರನ್ನ ಸೃಷ್ಟಿಸುವ ಶಕ್ತಿ ಇದೆ. ಪರೋಕ್ಷವಾಗಿ ಸಹೋದರ ಸತೀಶ್ ಮನವೊಲಿಸುವ ಅಗತ್ಯವಿಲ್ಲ ಎಂದ ಸಚಿವ ರಮೇಶ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರ ಬಂದ ಮೇಲೆ ಸಿದ್ದರಾಮಯ್ಯ ಮೂಲೆ ಗುಂಪಾಗಿಲ್ಲ. ಸಿದ್ದರಾಮಯ್ಯ ಅವರಿಂದಲೇ ನಾನು ಮಂತ್ರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.