ಭಾರತ, ಪಾಕಿಸ್ತಾನ, ಈಜಿಪ್ಟ್ ಸೇರಿದಂತೆ 6 ದೇಶಗಳಿಂದ ನೇರವಾಗಿ ಆಗಮಿಸುವ ವಿಮಾನ ಪ್ರಯಾಣಿಕರಿಗೆ ವಿಧಿಸಿದ್ದ ನಿಷೇಧವನ್ನು ಸೌದಿ ಅರೆಬಿಯಾ ಬುಧವಾರ ರದ್ದುಗೊಳಿಸಿದೆ.
ಭಾರತ, ಈಜಿಪ್ಟ್, ಪಾಕಿಸ್ತಾನ, ಇಂಡೋನೇಶ್ಯಾ, ಬ್ರೆಝಿಲ್ ಮತ್ತು ವಿಯೆಟ್ನಾಮ್ ದೇಶಗಳ ಪ್ರಯಾಣಿಕರಿಗೆ ಇನ್ನು ಮುಂದೆ ಸೌದಿ ಅರೆಬಿಯಾ ಪ್ರವೇಶಿಸುವ ಮುನ್ನ ದೇಶದ ಹೊರಗೆ 14 ದಿನದ ಕ್ವಾರಂಟೈನ್ ಕಡ್ಡಾಯವಾಗಿಲ್ಲ ಎಂದು ಸೂಚಿಸಲಾಗಿದೆ.