ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಸಿಕ್ಕಾಪಟ್ಟೆ ಕಾವೇರಿತ್ತು. ಆಢಳಿತ ಪಕ್ಷ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಭಾವಚಿತ್ರದ ಅಳವಡಿಕೆ ವಿಚಾರ ಇಡೀ ಸದನವೇ ಕದನವಾಗಿತ್ತು. ಕಾಂಗ್ರೆಸ್ ನಾಯಕರ ಪ್ರತಿಭಟನೆಯ ನಡುವೆಯು ವೀರ ಸಾವರ್ಕರ್ ಅವರ ಭಾವಚಿತ್ರವನ್ನ ಸ್ಪೀಕರ್ ಸೇರಿದಂತೆ ಆಢಳಿತ ಪಕ್ಷದ ನಾಯಕರು ವಿಧಾನಸಭೆಯಲ್ಲಿ ಅನಾವರಣ ಮಾಡಿದ್ರು.ಬೆಳಗಾವಿಯ ಚಳಿಗಾಲದ ಅಧಿವೇಶನ ಪ್ರಾರಂಭದ ಮೊದಲ ದಿನವೇ ಕಾವೇರಿದೆ. ಆಡಳಿತ ಪಕ್ಷ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವೀರ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರವಾಗಿ ದೊಡ್ಡ ವಾಗ್ವಾದವೇ ನಡೆದಿದೆ. ರಾಜ್ಯ ಸರ್ಕಾರ ಬೆಳಗಾವಿಯ ಸುವರ್ಣಸೌಧದ ವಿಧಾನಸಭೆಯಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣ ಮಾಡಿದೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಾವರ್ಕರ್ ಫೋಟೋವನ್ನು ಅನಾವರಣ ಮಾಡಲಾಯ್ತು.ಸಾವರ್ಕರ್ ಜೊತೆಗೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಸ್ವಾಮಿ ವಿವೇಕಾನಂದ, ಬಸವಣ್ಣರ ಫೋಟೋಗಳನ್ನೂ ಕೂಡ ಇದೇ ವೇಳೆ ಅನಾವರಣ ಮಾಡಲಾಗಿದೆ.ವೀರ ಸಾವರ್ಕರ್ ಅವರ ಫೋಟೋವನ್ನು ಸುವರ್ಣಸೌದದ ವಿಧಾನಸಭೆಯಲ್ಲಿ ಅನಾವರಣಗೊಳಿಸಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಸುವರ್ಣಸೌಧದ ಮೆಟ್ಟಿಲುಗಳ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ದೇಶದ ಹಲವು ನಾಯಕರ ದಾರ್ಶನಿಕರ ಭಾವಚಿತ್ರಗಳನ್ನ ಹಿಡಿದು ಅವರ ಭಾವಚಿತ್ರಗಳನ್ನ ಅಳವಡಿಕೆ ಮಾಡಿ ಅಂತ ಪ್ರತಿಭಟನೆ ಮಾಡಿದ್ರು.
ಬೆಳಗಾವಿಯ ಸುವರ್ಣಸೌದದ ವಿಧಾನಸಭೆಯಲ್ಲಿ ವೀರ್ ಸಾವರ್ಕರ್ ಫೋಟೋ ಅನಾವರಣಗೊಳಿಸಿದ್ದನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು. ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರವಾಗಿ ಮಾತನಾಡಿದ ಎಮ್ ಎಲ್ ಸಿ ರವಿಕುಮಾರ್, ಕಾಂಗ್ರೆಸ್ ಗೆ ನಾಚಿಕೆ ಆಗಬೇಕು,ನೆಹರು ಕುಟಂಬ ಮಾತ್ರನಾ ಸ್ವಾತಂತ್ರ್ಯ ಹೋರಾಟಮಾಡಿದ್ದಾರಾ,ಸಾವರ್ಕರ್ ಕರ್ ನಮ್ಮ ದೇಶ ಕಂಡ ಅಪ್ರತಿಮ ಹೊರಾಟಗಾರಕ್ರಾಂತಿಕಾರಿಗಳಿಗೆ ಗುರುಗಳಾಗಿದ್ರು.ಪಾರ್ಲಿಮೆಂಟ್ ಸೇರಿದಂತೆ ವಿಧಾನನಸಭೆ ಸಾರ್ವಜನಿಕ ಸ್ಥಳಗಳಲ್ಲಿ ಸಾವರ್ಕರ್ ಭಾವಚಿತ್ರಗಳನ್ನ ಹಾಕಬೇಕಂತ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ರು. ಇನ್ನೂ ಟೀಪು ಸುಲ್ತಾನ್ ದೇಶದ ದರೋಡೆಕೋರಾ, ಮತಾಂದ ದೇವಾಲಯಗಳನ್ನ ದ್ವಂಸ ಮಾಡಿದವನು.ಕನ್ನಡ ಬಾಷೆ ತೆಗೆದುಹಾಕಿ ಪರ್ಶಿಯನ್ ಭಾಷೆಯನ್ನ ಆಡಳಿತ ಬಾಷೆಯನ್ನಾಗಿ ಮಾಡಿದ್ದ, ಟಿಪ್ಪು ಫೋಟೊ ಹಾಕೋಕೆ ನಾವು ಬಿಡೋಲ್ಲಾ ಈ ವಿಚಾರವಾಗಿ ಕಾಂಗ್ರೆಸ್ ನವರು ಪ್ರತಿಭಟನೆ ಕರಗಿಹೋಗುತ್ತೆ ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ರಾಜಕೀಯ ಮಾಡಬಾರದು ಅಂತಾ ವಾಗ್ದಾಳಿ ನಡೆಸಿದ್ರು.
ವೀರಸಾವರ್ಕರ್ ಭಾವಚಿತ್ರ ಅನಾವರಣ ಮಾಡಿದಕ್ಕೆ ಬಿಜೆಪಿ ಶಾಸಕ ಯತ್ನಾಳ್ ಸಮರ್ಥನೆ ಮಾಡಿಕೊಂಡ್ರು. ಟಿಪ್ಪು ಭಾವಚಿತ್ರವನ್ನ ಅನಾವರಣ ಮಾಡಬೇಕಂತ ಕಾಂಗ್ರೆಸ್ ನಾಯಕರು ಹೇಳುದ್ರೆ ಅನಾವರಣ ಮಾಡೋದಕ್ಕೆ ಒಪ್ಪಿಕೊಳ್ತಿರಾ ಎಂಬ ವಿಚಾರಕ್ಕೆ ಶಾಸಕ ಯತ್ನಾಳ್ ಇತಿಹಾಸ ಚರ್ಚೆ ಮಾಡಿ ಬಹಿರಂಗವಾಗಿ ಚರ್ಚೆ ಮಾಡಿ,ಕೊಡಗಿನಲ್ಲಿ ಹತ್ಯೆ, ಅಯ್ಯಂಗಾರಿಗಳ ಕೊಲೆ, ಮತಾಂತಾರ ಮಾಡಿದ್ದಾನೆ.ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಛತ್ರಪತಿ ಶಿವಾಜಿ , ಸಂಗೊಳ್ಳಿ ರಾಯಣ್ಣ, ಚೆನ್ನಮ್ಮ ಅವರ ಭಾವಚಿತ್ರ ಹಾಕ್ತಿವಿ ಟಿಪ್ಪು ಸುಲ್ತಾನ್ ಭಾವಚಿತ್ರ ಹಾಕೋಕೆ ಬಿಡೊಲ್ಲಾ ಅಂತ ಯತ್ನಾಳ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ರು.