ತಮ್ಮ ಪ್ರಾಣಗಳ ಜತೆ ಇತರರ ಪ್ರಾಣವನ್ನು ಕಾಪಾಡಬೇಕು - ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್
ಶನಿವಾರ, 9 ಅಕ್ಟೋಬರ್ 2021 (21:30 IST)
ಸಾರ್ವಜನಿಕರು ಸಂಚಾರ ನಿಯಮ ಪಾಲಿಸುವ ಮೂಲಕ ತಮ್ಮ ಪ್ರಾಣಗಳ ಜತೆ ಇತರರ ಪ್ರಾಣವನ್ನು ಕಾಪಾಡಬೇಕು ಎಂದು ನಗರ ಪೆÇಲೀಸ್ ಆಯುಕ್ತ ಕಮಲ್‍ಪಂತ್ ಹೇಳಿದರು.
ಹುಳಿಮಾವು ಸಂಚಾರ ಪೆÇಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ನೀಡಿದರು.
ಸಭೆಯಲ್ಲಿ ನೆರೆದಿದ್ದ ಹುಳಿಮಾವು ನಿವಾಸಿಗಳು, ರಸ್ತೆ ದುರಸ್ತಿಗೊಂಡು ಭಾರಿ ಗುಂಡಿಗಳು ಬಿದ್ದಿವಿ. ಮಳೆ ಬಂದು ನೀರು ತುಂಬಿದರೆ ಗುಂಡಿ ಇರುವುದೇ ತಿಳಿಯದೇ ದ್ವಿಚಕ್ರವಾಹನ ಸವಾರರು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆಸಿದ ಆಯುಕ್ತರು, ರಸ್ತೆ ದುರಸ್ತಿ ಹಾಗೂ ಗುಂಡಿ ಮುಚ್ಚುವುದು ಬಿಬಿಎಂಪಿಗೆ ಸಂಬಂಧಪಟ್ಟ ವಿಷಯ. ಅವರು ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರ ಪರವಾಗಿ ಪೆÇಲೀಸ್ ಇಲಾಖೆ ಬಿಬಿಎಂಪಿ ಆಯುಕ್ತರ ಗಮನಕ್ಕೆ ತರಲಾಗುವುದು ಎಂದರು.
ಪಾರ್ಕಿಂಗ್ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತಿದೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ದೂರಿದ ನಿವಾಸಿಯೊಬ್ಬರಿಗೆ, ಎಲ್ಲ ಕಡೆಗಳಲ್ಲೂ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದರೆ ಸಂಚಾರಕ್ಕೆ ತೊಂದರೆಯಾಗಲಿದೆ. ಹಾಗಾಗಿ, ಸ್ಥಳ ನೋಡಿಕೊಂಡು ಪಾರ್ಕಿಂಗ್ ನೋಟಿಫಿಕೇಷನ್ ಮಾಡಲಾಗುವುದು. ಅದರಂತೆಯೇ ಸಾರ್ವಜನಿಕರು ಪಾರ್ಕಿಂಗ್ ಮಾಡಬೇಕು. ಜನರಿಗೆ ವಿನಃಕಾರಣ ತೊಂದರೆ ನೀಡುವುದು ಪೆÇಲೀಸ್ ಇಲಾಖೆಯ ಉದ್ದೇಶವಲ್ಲ, ಜನರ ಹಿತ ಹಾಗೂ ಸಂಚಾರಕ್ಕೆ ತೊಂದರೆಯಾಗದಂತೆ ಕೆಲವು ನಿಯಮಗಳನ್ನು ಪಾಲಿಸುವುದು ಅನಿವಾರ್ಯ ಎಂದು ಹೇಳಿದರು.
ಆರ್‍ಟಿಓ ಕಚೇರಿಗೆ ಬರುವ ವಾಹನಗಳಿಂದ ಸಮಸ್ಯೆ:
ಆರ್‍ಟಿಓ ಕಚೇರಿಗೆ ಬರುವ ವಾಹನಗಳಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಸ್ಥಳೀಯರೊಬ್ಬರ ದೂರಿಗೆ, ವಾಹನ ನೋಂದಣಿಗಾಗಿ ನಿತ್ಯ ನೂರಾರು ವಾಹನಗಳು ಆರ್‍ಟಿಓ ಕಚೇರಿಗೆ ಬರುತ್ತವೆ. ಡಿಎಲ್ ಮಾಡಿಸುವವರು ವಾಹನಗಳನ್ನು ತರುತ್ತಾರೆ. ಹೀಗಾಗಿ, ಆರ್‍ಟಿಓ ಕಚೇರಿಗಳಿಗೆ ವಾಹನಗಳು ಬರುವುದನ್ನು ನಿಯಂತ್ರಿಸುವುದು ಕಷ್ಟ. ಆದರೆ, ರಸ್ತೆಗಳಲ್ಲಿ ಬೇಕಾಬಿಟ್ಟಿ ನಿಲ್ಲಿಸದೆ ನಿಗದಿತ ಸ್ಥಳಗಳಲ್ಲಿ ನಿಲ್ಲಿಸುವಂತೆ ಸೂಚಿಸಬಹುದು. ಆರ್‍ಟಿಓ ಕಚೇರಿಯೂ ಕೂಡ ಸಾರ್ವಜನಿಕರ ಅನುಕೂಲಕ್ಕಾಗಿಯೇ ಇದೆ ಎನ್ನುವುದನ್ನು ಯಾರು ಮರೆಯಬಾರದು ಎಂದು ತಿಳಿಸಿದರು.
ವೀಲಿಂಗ್ ಮಾಡುವವರ ವಿರುದ್ಧ ಕ್ರಮ:
ಹುಳಿಮಾವು ಮುಖ್ಯ ರಸ್ತೆಗಳಲ್ಲಿ ವೀಲಿಂಗ್ ಮಾಡುವವರ ಪುಂಡರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸ್ಥಳೀಯರ ದೂರಿಗೆ ಪ್ರತಿಕ್ರಿಯೆಸಿ, ಯಾವ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದರೆ ಕೂಡಲೇ ಸಂಚಾರ ಪೆÇಲೀಸರು ವಾಹನ ಜಪ್ತಿ ಮಾಡಿ ವೀಲಿಂಗ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಯುವಕರು ವೀಲಿಂಗ್ ಮಾಡುವುದರಿಂದ ಕೇವಲ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದಲ್ಲದೇ ನೆರವರೆಯವರ ಜೀವಕ್ಕೂ ಎರವಾಗುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಪೆÇೀಷಕರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕು. ಇಲ್ಲವೇ ವೀಲಿಂಗ್ ಮಾಡುವಾಗ ಪೆÇಲೀಸರ ಕೈಗೆ ಸಿಕ್ಕರೆ ಅವರ ಎಡೆಮುರಿಕಟ್ಟಲಾಗುವುದು ಎಂದು ಎಚ್ಚರಿಕೆ ನೀಡಿದರು.
ಟೋಯಿಂಗ್ ಮಾಡುವವರ ವಿರುದ್ಧ ದೂರು:
ಅಂಗಡಿಗಳು, ನಂದಿನ ಹಾಲಿನ ಕೇಂದ್ರಗಳು, ಬೇಕರಿಗಳ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿ ಒಳ ಹೋಗಿ ಬರುವಷ್ಟರಲ್ಲಿ ಟೋಯಿಂಗ್ ಸಿಬ್ಬಂದಿಗಳು ತಮ್ಮ ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ಯಾವೊಬ್ಬ ಸಿಬ್ಬಂದಿಯೂ ಟೋಯಿಂಗ್ ನಿಯಮ ಪಾಲಿಸುತ್ತಿಲ್ಲ ಎಂದು ದೂರಿದರು.
ಈ ಸಂಬಂಧ ಪ್ರತಿಕ್ರಿಯೆಸಿದ ಆಯುಕ್ತರು, ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ ವಾಹನಗಳನ್ನು ನಿಯಮ ಪಾಲನೆ ಮೂಲಕ ಟೋಯಿಂಗ್ ಮಾಡಲಾಗುತ್ತಿದೆ. ನೋಟಿಫಿಕೆಷನ್ ಹಾಕಿರುವ ರಸ್ತೆಗಳಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ಜತೆಗೆ ನಗರದ ಯಾವುದೇ ಜಂಕ್ಷನ್ ಇದ್ದರೂ ಆ ಜಂಕ್ಷನ್‍ನಿಂದ 50 ಮೀಟರ್ ದೂರದಲ್ಲಿ ವಾಹನ ನಿಲ್ಲಿಸಬಾರದು ಎಂಬ ನಿಯಮವಿದೆ. ಹೀಗಾಗಿ, ಜನರು ಈ ನಿಯಮ ಪಾಲಿಸಬೇಕು. ಇನ್ನು ವಾಹನಗಳನ್ನು ಟೋಯಿಂಗ್ ಮಾಡುವಾಗ ಕೆಲವು ನಿಯಮಗಳ ಪಾಲಿಸುವಂತೆ ಎಲ್ಲ ಸಂಚಾರ ಪೆÇಲೀಸರು ಹಾಗೂ ಟೋಯಿಂಗ್ ಸಿಬ್ಬಂದಿಗೆ ಸೂಚಿಸಲಾಗಿದೆ. ಉದ್ದೇಶಪೂರ್ವಕವಾಗಿ ನಿಯಮ ಪಾಲಿಸದೇ ಟೋಯಿಂಗ್ ಮಾಡಿದರೆ ಅಂತಹ ಟೋಯಿಂಗ್ ಸಿಬ್ಬಂದಿ ವಿರುದ್ಧ ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.