ಎಸ್.ಬಿ.ಐ. ಶಾಖೆಯನ್ನು ಮುಚ್ಚಲು ನಿರ್ಧಾರ ಮಾಡಿದ್ಯಾಕೆ ?

ಗುರುವಾರ, 1 ನವೆಂಬರ್ 2018 (14:41 IST)
ತುಮಕೂರು : ರೈತರ ಸಾಲ ವಸೂಲಾಗದೆ ನಷ್ಟ ಅನುಭವಿಸುತ್ತಿರುವ ಕಾರಣದಿಂದ ಇದೀಗ ಜಿಲ್ಲೆಯ ಪಾವಗಡ ತಾಲೂಕಿನ ಅರಿಸಿಕೆರೆಯ ಶಾಖೆಯನ್ನು ಮುಚ್ಚಲು ಸ್ಟೇಟ್ ಬ್ಯಾಂಕ್ ಇಂಡಿಯಾ ಮುಂದಾಗಿದೆ.


ಈ ಶಾಖೆಯಲ್ಲಿ ಸುಮಾರು 2 ಕೋಟಿ ರೂಪಾಯಿ ಸಾಲವನ್ನು ರೈತರಿಗೆ ನೀಡಿದೆ.  ಆದರೆ ಇದೂವರೆಗೂ ರೈತರಿಂದ ಸಾಲ ವಸೂಲಿ ಆಗದ ಕಾರಣ ಅಧಿಕಾರಿಗಳು ಬ್ಯಾಂಕ್ ನಷ್ಟದಲ್ಲಿದೆ ಎಂದು ವರದಿ ನೀಡಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ಆವರಣದಲ್ಲಿ ಶಾಖೆ ಮುಚ್ಚದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿ, ಋಣಮುಕ್ತ ಪತ್ರವನ್ನು ರೈತರ ಮನೆಬಾಗಿಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದ ಕೆಲವು ಬ್ಯಾಂಕುಗಳು ರೈತರಿಂದ ಸಾಲ ವಸೂಲಿಯಾಗದೇ ನಷ್ಟದಿಂದ  ಶಾಖೆಗಳನ್ನೇ ಮುಚ್ಚಲು ಮುಂದಾಗುತ್ತಿವೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ