ಮೀಟೂ ಆರೋಪ ; ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ ಅರ್ಜುನ್ ಸರ್ಜಾ
ಗುರುವಾರ, 25 ಅಕ್ಟೋಬರ್ 2018 (15:51 IST)
ಬೆಂಗಳೂರು : ಮೀಟೂ ಆರೋಪ ಮಾಡಿದ ನಟಿ ಶ್ರುತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಅವರು ಗುರುವಾರ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.
'ವಿಸ್ಮಯ' ಸಿನೆಮಾ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ಅವರು ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರುತಿ ಹರಿಹರನ್ ಅವರು ಆರೋಪ ಮಾಡಿದ್ದರು.
ಈ ಆರೋಪದ ಬಗ್ಗೆ ಇದೀಗ ಅರ್ಜುನ್ ಸರ್ಜಾ ಅವರು ಶ್ರುತಿ ಹರಿಹನ್ ವಿರುದ್ಧ ಬೆಂಗಳೂರಿನ ಸಿವಿಲ್ ಕೋರ್ಟ್‌ನಲ್ಲಿ ಧ್ರುವ ಸರ್ಜಾ ಮೂಲಕ ಮಾನನಷ್ಟ ಮೊಕದ್ದಮೆ ದಾಖಲು ಮಾಡಿಸಿದ್ದು 5 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಮನವಿ ಸಲ್ಲಿಸಿದ್ದಾರೆ. ಜೊತೆಗೆ, ಈ ಪ್ರಕರಣ ಕುರಿತಂತೆ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಶ್ರುತಿ ಹರಿಹರನ್ ವಿರುದ್ಧ ನಿರ್ಬಂಧ ಹೇರಬೇಕೆಂದು ಅರ್ಜುನ್ ಸರ್ಜಾ ಅವರು ಕೋರಿದ್ದಾರೆ.
ಹಾಗೇ ಪ್ರೇಮ ಬರಹ ಸಿನಿಮಾ ಒಪ್ಪಂದಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ಅರ್ಜುನ್ ಸರ್ಜಾ ಕಳುಹಿಸಿದ್ದ ಇ-ಮೇಲ್‌ನ್ನು ನಟ ಚೇತನ್ ಮಂಗಳವಾರ ಫೇಸ್‌ಬುಕ್ ಖಾತೆಯಲ್ಲಿ ಬಹಿರಂಗ ಪಡಿಸಿದ ಬೆನ್ನಲೆ ನಟ ಅರ್ಜುನ್ ಸರ್ಜಾ ರ ಇಮೇಲ್- ಟ್ವಿಟರ್, ಫೇಸ್ ಬುಕ್ ಹ್ಯಾಕ್ ಅಗಿದೆ ಅಂತ ಅರ್ಜುನ್ ಸರ್ಜಾ ರ ಅವರ ಮ್ಯಾನೇಜರ್ ಶಿವು ಅವರು ಬೆಂಗಳೂರು ಪೋಲಿಸ್ ಆಯ್ತುಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.