Video: ಕನ್ನಡ ಮಾತನಾಡಲ್ಲ ಎಂದಿ ಧಿಮಾಕು ತೋರಿದ್ದ SBI ಸಿಬ್ಬಂದಿ: ಈಗ ವರಸೆಯೇ ಬದಲು

Krishnaveni K

ಬುಧವಾರ, 21 ಮೇ 2025 (09:45 IST)
ಬೆಂಗಳೂರು: ಕನ್ನಡ ಮಾತನಾಡಲ್ಲ ಎಂದು ಬೆಂಗಳೂರಿನ ಎಸ್ ಬಿಐ ಬ್ಯಾಂಕ್ ಶಾಖೆಯ ಅಧಿಕಾರಿಯೊಬ್ಬರು ಧಿಮಾಕು ತೋರಿದ್ದರು. ಇದೀಗ ಘಟನೆ ಬಗ್ಗೆ ಆಕ್ರೋಶವ್ಯಕ್ತವಾಗುತ್ತಿದ್ದಂತೇ ಉಲ್ಟಾ ಹೊಡೆದಿದ್ದಾರೆ.
 

ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪುರದ ಎಸ್ ಬಿಐ ಶಾಖೆಯ ವ್ಯವಸ್ಥಾಪಕಿಯೊಬ್ಬರು ಗ್ರಾಹಕರೊಂದಿಗೆ ಕನ್ನಡ ಮಾತನಾಡಲ್ಲ ಎಂದಿದ್ದಲ್ಲದೆ, ಇದು ಇಂಡಿಯಾ ಹಿಂದಿ ರಾಷ್ಟ್ರ ಭಾಷೆ ಎಂದು ದರ್ಪ ತೋರಿದ್ದರು. ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಮಹಿಳಾ ಅಧಿಕಾರಿ ವಿರುದ್ಧ  ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಯಾವ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೇವೋ ಆ ಪ್ರದೇಶದ ಗ್ರಾಹಕರೊಂದಿಗೆ ಆಯಾ ಪ್ರಾದೇಶಿಕ ಭಾಷೆಯಲ್ಲೇ ಮಾತನಾಡಬೇಕು ಎನ್ನುವ ನಿಯಮವಿದೆ. ಹಾಗಿದ್ದರೂ ಮಹಿಳಾ ಅಧಿಕಾರಿ ದರ್ಪ ತೋರಿದ್ದರು.

ಇದೀಗ ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೇ ಮಹಿಳಾ ಅಧಿಕಾರಿ ಕ್ಷಮೆ ಯಾಚಿಸಿದ್ದಾರೆ. ಕೆಲವು ಕನ್ನಡ ಸಂಘಟನೆಗಳು ಬ್ಯಾಂಕ್ ಗೆ ತೆರಳಿ ಅಧಿಕಾರಿಯನ್ನು ಪ್ರಶ್ನಿಸುತ್ತಿದ್ದಂತೇ ವರಸೆ ಬದಲಿಸಿದ್ದು, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಕನ್ನಡ ಮಾತನಾಡಲು ಪ್ರಯತ್ನಿಸುತ್ತೇನೆ ಎಂದು ಕ್ಷಮೆ ಯಾಚಿಸಿದ್ದಾರೆ.

#SBI #Bengaluru #Kannada ಕನ್ನಡ ಮಾತನಾಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ ಎಂದು ದರ್ಪ ತೋರಿದ ಎಸ್ ಬಿಐ ಬ್ಯಾಂಕ್ ಮಹಿಳಾ ಸಿಬ್ಬಂದಿಯ ವಿಡಿಯೋ ನೋಡಿ pic.twitter.com/jxYJgq2qNP

— Webdunia Kannada (@WebduniaKannada) May 20, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ