ಸಿದ್ದರಾಮಯ್ಯ, ಕೆಜೆ ಜಾರ್ಜ್ ವಿರುದ್ಧ ಕೋಟ್ಯಂತರ ರೂಪಾಯಿ ಹಗರಣ ಆರೋಪ

ಮಂಗಳವಾರ, 25 ಸೆಪ್ಟಂಬರ್ 2018 (13:17 IST)
ಬೆಂಗಳೂರು: ಎಲ್ ಇಡಿ ಬಲ್ಬ್ ಅಳವಡಿಕೆ ಸಂಬಂಧ ಖಾಸಗಿ ಕಂಪನಿಗಳಿಂದ ಸಾವಿರಾರು ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಕೆಜೆ ಜಾರ್ಜ್ ವಿರುದ್ಧ ದೂರು ದಾಖಲಾಗಿದೆ.

ಇಬ್ಬರೂ ತಲಾ 600 ಕೋಟಿ ರೂ.ಗಳಂತೆ 1200 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಎಲ್ ಇಡಿ ಬಲ್ಬ್ ಅಳವಡಿಸುವ ಗುತ್ತಿಗೆ ಪಡೆದ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನಲಾಗಿದೆ. ಬಿಜೆಪಿ ನಗರ ವಕ್ತಾರ ಎನ್ ಆರ್ ರಮೇಶ್ ಈ ಬಗ್ಗೆ ದೂರು ನೀಡಿದ್ದಾರೆ.

ಈ ಸಂಬಂಧ ಇದೀಗ ಲೋಕಾಯುಕ್ತ, ಎಸಿಬಿ ಮತ್ತು ಬಿಎಂಟಿಎಫ್ ನಲ್ಲಿ ದೂರು ದಾಖಲಾಗಿದೆ.  ಗುತ್ತಿಗೆ ಪಡೆದ ಕಂಪನಿ ಜತೆಗೆ ಜಾರ್ಜ್ ಸಂಬಂಧ ಹೊಂದಿದ್ದರು ಎಂದು ಆರೋಪ ಹೊರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ