ಕ್ರೈಂ ಧಾರವಾಹಿ ನೋಡಿ ಕಿಡ್ನಾಪ್ ಮಾಡಿ ಸಿಕ್ಕಿಬಿದ್ದ ಭೂಪ
ಮಾಡಬಾರದ್ದನ್ನು ಮಾಡಿದ್ರೆ ಆಗಬಾರದ್ದು ಆಗ್ತದೆ ಅನ್ನೋದಕ್ಕೆ ಈ ಯುವಕ ಸಾಕ್ಷಿಯಾಗಿದ್ದಾನೆ.
ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಕಾಟನ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿದ ಆರೋಪಿ, ಬುಲ್ ಟೆಂಪಲ್ ಹತ್ತಿರದ ನಿವಾಸಿ ಚಿರಾಗ್ ಮೆಹ್ತಾ (22) ನನ್ನು ಬಂಧನ ಮಾಡಿದ್ದಾರೆ.
ಟಿವಿಯಲ್ಲಿ ಬರೋ ಕ್ರೈಂ ಪ್ಯಾಟ್ರೋಲ್ ಧಾರವಾಹಿ ನೋಡಿ ವ್ಯಾಪಾರಿಯೊಬ್ಬನ ಮಗನನ್ನು ಆರೋಪಿ ಕಿಡ್ನಾಪ್ ಮಾಡಿದ್ದನು.
ಬಾಲಕನ ಪೋಷಕರು ಕೇಸ್ ನೀಡುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಿಡ್ನಾಪರ್ ನ ಬಂಧನ ಮಾಡಿದ್ದಾರೆ.