ಹೋಟೆಲ್ ಗಳಲ್ಲಿ ಸ್ವ ಸಹಾಯ ಪದ್ಧತಿ ಅಂತಾ ಬೋರ್ಡ್ ಇರುತ್ತದೆ. ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸ್ವ – ಚಿಕಿತ್ಸಾ ಪದ್ಧತಿ ಇರುತ್ತಾ? ಏನು ಇದನ್ನು ಕೇಳಿಲ್ಲವೇ? ಹಾಗಿದ್ರೆ ಮುಂದೆ ಓದಿ…
ಸರ್ಕಾರಿ ಆಸ್ಪತ್ರೆಯಲ್ಲಿ ಸ್ವ- ಚಿಕಿತ್ಸಾ ಪದ್ಧತಿ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆಯಾ? ಎನ್ನುವ ಅನುಮಾನ ಕಾಡಲಾರಂಭಿಸಿದೆ. ರೋಗಿಗಳಿಗೆ ರೋಗಿಗಳೇ ಚಿಕಿತ್ಸೆ ಮಾಡಿಕೊಳ್ಳುವ ಸರ್ಕಾರಿ ಆಸ್ಪತ್ರೆ ಕಂಡುಬಂದಿದೆ.
ಡ್ರಗ್ಸ್ ಮತ್ತು ಗ್ಲೂಕೋಸ್ ನ್ನು ಕುಟುಂಬಸ್ಥರು ರೋಗಿಗಳಿಗೆ ನೀಡುತ್ತಿದ್ದಾರೆ. ಅಂದ್ಹಾಗೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಅವರ ಕುಟುಂಬದವರೇ ಡಾಕ್ಟರ್ಸ್ ಆಗಿದ್ದಾರೆ.
ಎಷ್ಟು ಸಮಯ ಕಳೆದರೂ ಚಿಕಿತ್ಸೆ ನೀಡಲು ವೈದ್ಯರು ಬರೋದಿಲ್ಲ ಎನ್ನೋದು ರೋಗಿಗಳ ಹಾಗೂ ಅವರ ಸಂಬಂಧಿಗಳ ದೂರಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸ್ವತಃ ತಾವೇ ಚಿಕಿತ್ಸೆ ಮಾಡಿಕೊಳ್ಳಲು ರೋಗಿಗಳು ಮುಂದಾಗುತ್ತಿದ್ದಾರೆ.
ವೈದ್ಯರ ಕೊರತೆಯಿಂದ ರೋಗಿಗಳು ಸ್ವ ಚಿಕಿತ್ಸೆ ಮಾಡುಕೊಳ್ಳುತ್ತಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.