ಕೂದಲು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪ್ರಾಣಕ್ಕೆ ಕುತ್ತು ತಂದುಕೊಂಡ ಉದ್ಯಮಿ
ಮಂಗಳವಾರ, 12 ಮಾರ್ಚ್ 2019 (06:46 IST)
ಮಹಾರಾಷ್ಟ್ರ : ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಕೂದಲು ಕಸಿ ಮಾಡಿಸಿಕೊಂಡ ಉದ್ಯಮಿಯೊಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಶ್ರವಣ್ ಕುಮಾರ್ ಚೌಧರಿ(43ವರ್ಷ) ಸಾವನಪ್ಪಿದ ಉದ್ಯಮಿ. ಇವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಮಾರು 5 ಲಕ್ಷ ರೂಪಾಯಿ ಹಣವನ್ನು ನೀಡಿ ಕೂದಲು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಕಸಿ ಮಾಡಿಸಿಕೊಂಡ ಎರಡು ದಿನಗಳ ನಂತರ ಚೌಧರಿ ಅವರ ಮುಖ ಊದಿಕೊಳ್ಳತೊಡಗಿತ್ತು, ಅಲ್ಲದೇ ಉಸಿರಾಟದ ತೊಂದರೆ ಅನುಭವಿಸತೊಡಗಿದ್ದರು.
ತಕ್ಷಣ ವೈದ್ಯರು ಬಂದು ಪರೀಕ್ಷಿಸಿದ್ದರೂ ಕೂಡ ಅಷ್ಟರಲ್ಲೆ ಮೃತಪಟ್ಟಿದ್ದಾರೆ. ಮಾರಕ ಅಲರ್ಜಿ ರಿಯಾಕ್ಷನ್ ನಿಂದಾಗಿ ಆತನ ಸಾವು ಸಂಭವಿಸಿರಬೇಕೆಂದು ವೈದ್ಯರು ಸಮಜಾಯಿಷಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವಿರುದ್ಧ ಅಪರಾಧ ದಂಡ ಸಂಹಿತೆ ಕಲಂ 174ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.