ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ನಟ ಶಿವರಾಂ

ಶುಕ್ರವಾರ, 2 ನವೆಂಬರ್ 2018 (07:20 IST)
ಉಡುಪಿ : ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು  ಸುಪ್ರೀಂಕೋರ್ಟ್ ನೀಡಿದ ತೀರ್ಪುನ ಬಗ್ಗೆ ಇದೀಗ ಹಿರಿಯ ನಟ ಹಾಗೂ ರಾಜ್ಯ ಅಯ್ಯಪ್ಪ ಭಕ್ತ ಸಂಘದ ಅಧ್ಯಕ್ಷ ಶಿವರಾಂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಎಂಜಿಎಂ ಮೈದಾನದಲ್ಲಿ ನಡೆದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ದೇವಾಲಯ ಮೊದಲು ಹುಟ್ಟಿತಾ? ನ್ಯಾಯಾಲಯ ಮೊದಲು ಹುಟ್ಟಿದೆಯೇ ಎಂದು ಪ್ರಶ್ನಿಸಿ, ನಾವು ಪಾರಂಪರಿಕವಾಗಿ ಬಂದ ಸಂಪ್ರದಾಯ ಪಾಲಿಸುತ್ತೇವೆ.


ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕೋಟ್ಯಂತರ ಭಕ್ತರ ನೋವಿಗೆ ಕಾರಣವಾಗಿದೆ. ಮಹಿಳೆಯರು ಶಬರಿಮಲೆಗೆ ಪ್ರವೇಶ ಮಾಡುವುದು, ಅಯ್ಯಪ್ಪನಿಗೆ ಹಿಡಿಸದ ಸಂಪ್ರದಾಯ ಎಂದು ತಿಳಿಸಿದ್ದಾರೆ.


ಶಬರಿಮಲೆ ಪ್ರವೇಶಿಸಲು ಯತ್ನಿಸಿದ  ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಂ ಅವರು, ಆಕೆ ಒಂದು ದಿನವಾದರೂ ಮಸೀದಿಗೆ ಹೋಗಿದ್ದಾಳಾ ಎಂದು ಪ್ರಶ್ನಿಸಿದ್ದಾರೆ. ಹಾಗೇ  ಶಬರಿಮಲೆಗೆ ಮಹಿಳೆ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂಪ್ರದಾಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ