ದೀಪಾವಳಿಗೆ ಪಟಾಕಿ ಹೊಡೆಯುವ ಮೊದಲು ಸುಪ್ರೀಂಕೋರ್ಟ್ ತೀರ್ಪು ಏನೆಂದು ನೋಡಿ!
ಮಂಗಳವಾರ, 23 ಅಕ್ಟೋಬರ್ 2018 (15:41 IST)
ನವದೆಹಲಿ: ಈ ದೀಪಾವಳಿಗೆ ಯರ್ರಾ ಬಿರ್ರಿ ಪಟಾಕಿ ಹೊಡೆಯುವಂತಿಲ್ಲ! ಹಾಗಂತ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ದೀಪಾವಳಿ ಹಬ್ಬಕ್ಕೆ ಎರಡು ವಾರಗಳ ಮೊದಲು ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಪಟಾಕಿ ಹೊಡೆಯುವ ವಿಚಾರದಲ್ಲಿ ನಿರ್ಬಂಧ ವಿಧಿಸಿದೆ.
ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಹೆಚ್ಚು ಸದ್ದು ಮಾಡದ ಪಟಾಕಿ ಹೊಡೆಯಬಹುದಾಗಿದೆ. ಹಗಲು ಹೊತ್ತು ಪಟಾಕಿ ಹೊಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇನ್ನು ಆನ್ ಲೈನ್ ನಲ್ಲಿ ಪಟಾಕಿ ಸೇಲ್ ಮಾಡುವಂತಿಲ್ಲ. ಸುಪ್ರೀಂಕೋರ್ಟ್ ನ ಈ ನಿರ್ದೇಶನ ಪಾಲನೆಯಾಗುವಂತೆ ನೋಡಿಕೊಳ್ಳುವುದು ಸ್ಥಳೀಯ ಪೊಲೀಸರ ಕರ್ತವ್ಯವಾಗಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ದೀಪಾವಳಿಗೆ ಮಾತ್ರವಲ್ಲ, ಹೊಸ ವರ್ಷದಂದೂ ಮಧ್ಯರಾತ್ರಿ 11.55 ರಿಂದ 12.35 ರವರೆಗೆ ಮಾತ್ರ ಪಟಾಕಿ ಹೊಡೆಯಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ಹೀಗಾಗಿ ಪಟಾಕಿ ಹೊಡೆಯುವ ಮೊದಲು ಹುಷಾರ್!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.