ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ: ವಿಭಿನ್ನ ಪ್ರತಿಭಟನೆ

ಗುರುವಾರ, 2 ಆಗಸ್ಟ್ 2018 (20:30 IST)
ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ ಹಿನ್ನೆಲೆ ಗದಗ ಜಿಲ್ಲೆನಲ್ಲಿ ಕಳಸಾ-ಬಂಡೂರಿ ಹಾಗೂ ಮಲಪ್ರಭಾ ಜೋಡಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಗದಗ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಹೋರಾಟಗಾರ ವಿಜಯ್ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ ಇಲ್ಲವೆ, ಪ್ರತ್ಯೇಕ ರಾಜ್ಯ ಮಾಡಿ ಎಂಬ ಘೋಷಣೆ ಕೂಗಿ ತಮ್ಮ‌ಆಕ್ರೋಶ ಹೊರ ಹಾಕಿದರು. ಮಹಾತ್ಮ ಗಾಂಧಿ ವೃತ್ತದಿಂದ ಪ್ರತಿಭಟನಾ ರ್ಯಾಲಿ ನಡೆಸಿ ಗದಗ ತಹಶೀಲ್ದಾರ್ ಮೂಲಕ ಸಿ.ಎಮ್ ಗೆ ಮನವಿ ನೀಡಿದರು.

ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲೂ ಪಕ್ಷಾತೀತ ರೈತ ಹೋರಾಟ ಸಮಿತಿ ವಿನೂತನ ಪ್ರತಿಭಟನೆ ಮಾಡಲಾಯಿತು. ಲಕ್ಷ್ಮೇಶ್ವರ ಬಸ್ ನಿಲ್ದಾಣ ಎದುರು ರಸ್ತೆಯಲ್ಲಿ ಕುಳಿತು, ಖಡಕ್ ರೊಟ್ಟಿ,  ಶೇಂಗಾ ಚಟ್ನಿ ಊಟಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.

ದಕ್ಷಿಣ ಕರ್ನಾಟಕದವರು ಮೃಷ್ಠಾನ್ನ ಭೋಜನ ಮಾಡ್ತಾರೆ. ಆದ್ರೆ ನಾವು ನಾವು ಖಡಕ್ ರೊಟ್ಟಿ, ಕಾರದಪುಡಿ ತಿನ್ನುವಂತಾಗಿದೆ ಎಂದು ವ್ಯಂಗಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಪಕ್ಷಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಹರಿಹಾಯ್ದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ