ನಮಗೆ ಉತ್ತರ ಕರ್ನಾಟಕ ಬೇರೆಯಲ್ಲ…. ದಕ್ಷಿಣ ಕರ್ನಾಟಕ ಬೇರೆಯಲ್ಲ…ಬೆಳಗಾವಿಯಲ್ಲಿ ಬೇರೆ ಯಾರೂ ಯಾಕೆ ಅಧಿವೇಶನ ಮಾಡಿರಲಿಲ್ಲ? ಅಲ್ಲಿ ಅಧಿವೇಶನ ಮಾಡೊಕೆ ಕುಮಾರಸ್ವಾಮಿ ಸಿಎಂ ಆಗಿ ಬರಬೇಕಾಯ್ತು. ಯಡಿಯೂರಪ್ಪ ಅವರಿಗೆ ಬೇರೆ ಕೆಲಸ ಇಲ್ಲ. ಹೀಗಂತ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹಾಗಾಗಿ ಹೋರಾಟ ಮಾಡಿಸುತ್ತಿದ್ದಾರೆಂದು ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷವಾದ್ರು ಮಹದಾಯಿ ವಿಚಾರ ಬಗೆಹರಿದಿಲ್ಲ. ಬಿಜೆಪಿಯವರಿಗೆ ಇದೊಂದು ಸಮಸ್ಯೆ ಇತ್ಯರ್ಥ ಮಾಡಲು ಏಕೆ ಆಗಿಲ್ಲ ಎಂದು ಪ್ರಶ್ನೆ ಮಾಡಿದರು. ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಕಾಲೇಜುಗಳೇ ಇರ್ಲಿಲ್ಲ. ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ಅಬಿವೃದ್ಧಿಗೆ ಕುಮಾರಸ್ವಾಮಿ ಬರಬೇಕಾಯ್ತ ಎಂದು ಹೇಳಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕಿಡಿ ಕಾರಿದ್ದಾರೆ.
ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಕಿಡಿಕಾರಿದ ಸಚಿವರು, ಹುಚ್ಚನಕೊಪ್ಪಲು ಏತ ನೀರಾವರಿಗೆ ಯೋಜನೆಗೆ ಚಾಲನೆ ನೀಡಿ ಹೇಳಿಕೆ ನೀಡಿದ್ದು, ಬೆಳಗಾವಿಯನ್ನ ಎರಡನೇ ರಾಜಧಾನಿ ಮಾಡುವುದಲ್ಲ. ಸರ್ಕಾರದ ಪ್ರಮುಖ ಇಲಾಖೆಯ ಕಛೇರಿಯನ್ನ ಉತ್ತರ ಭಾಗದಲ್ಲಿ ತೆರೆದರೆ ತಪ್ಪೇನು ಎಂದು ಹೇಳಿದ್ದಾರೆ.