ಪ್ರತ್ಯೇಕ ಲಿಂಗಾಯುತ ಧರ್ಮ: ಸಿಎಂ ಸಿದ್ದರಾಮಯ್ಯಗೆ ಮಾತೆ ಮಹಾದೇವಿ ಡೆಡ್‌ಲೈನ್

ಭಾನುವಾರ, 19 ನವೆಂಬರ್ 2017 (17:06 IST)
ರಾಜ್ಯ ಸರಕಾರ ಡಿಸೆಂಬರ್ 15 ರೊಳಗಾಗಿ ಪ್ರತ್ಯೇಕ ಲಿಂಗಾಯುತ ಧರ್ಮ ಕುರಿತಂತೆ ಸಿಎಂ ಸಿದ್ದರಾಮ್ಯ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಾತೆ ಮಹಾದೇವಿ ಸರಕಾರಕ್ಕೆ ಡೆಡ್‌ಲೈನ್ ನೀಡಿದ್ದಾರೆ. 
 
ಭಾನುವಾರ ಬೆಂಗಳೂರಿನ ರಾಷ್ಟ್ರೀಯ ಕಾಲೇಜಿನಲ್ಲಿ ಬೃಹತ್ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಮಾತೆ ಮಹಾದೇವಿ, ಲಿಂಗಾಯತರು ಮತ್ತು ವೀರಶೈವರು ಒಂದಾಗಿ ಬರಲು ಸಿದ್ಧರಾಮಯ್ಯ ಕಾಯುತ್ತಿದ್ದಾರೆ. ಆದರೆ ಅದು ಎಂದಿಗೂ ಸಂಭವಿಸುವುದಿಲ್ಲ. "ವೀರಶೈವರು ಮತ್ತು ಲಿಂಗಾಯತರು ಭಿನ್ನವಾಗಿರುವುದರಿಂದ ನಾವು ಎಂದಿಗೂ ಒಪ್ಪಿಕೊಳ್ಳಲಾಗದು, ಕನಿಷ್ಠ ಪಕ್ಷ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಬಹುತೇಕ ಲಿಂಗಾಯತರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮ ಲಿಂಗಾಯುತರ ಮನವಿಯನ್ನು ಡಿಸೆಂಬರ್ 15ರೊಳಗಾಗಿ ಕೇಂದ್ರ ಸರಕಾರಕ್ಕೆ ರವಾನಿಸಬೇಕು ಎಂದರು.
 
ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲು ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಕೇಂದ್ರಕ್ಕೆ ಕಳುಹಿಸಬೇಕು. ವೀರಶೈವರು ಶೈವೈಟ್ ವಂಶದವರು, ಆದರೆ ಲಿಂಗಾಯತ ವಚನಗಳಿಂದ ಹುಟ್ಟಿದ್ದು, ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ನಾವು ಪೂಜಿಸುವುದಿಲ್ಲ. ನಮ್ಮ ಧರ್ಮ ವಿಶ್ವವೇ ಗುರುತಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ