ಬೆಂಗಳೂರು: ಧಾರವಾಹಿಗಳು ಜನರ ಮನಸ್ಸಿಗೆ ಎಷ್ಟು ಬೇಗ ತಲುಪುತ್ತದೆ ಮತ್ತು ಎಷ್ಟು ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ.
ಅದೇ ರೀತಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿ ನೋಡುತ್ತಿದ್ದ ಪರಿವಾರದ ಮಗುವೊಂದು ಧಾರವಾಹಿಯ ಪ್ರಭಾವದಿಂದ ಮೈಗೆ ಬೆಂಕಿ ಹಚ್ಚಿಕೊಂಡು ಸಾವಿಗೀಡಾದ ಶಂಕೆ ವ್ಯಕ್ತವಾಗಿದೆ.
ಧಾರವಾಹಿಯಲ್ಲಿ ಬರುವ ದೃಶ್ಯವನ್ನು ನೋಡಿ ಪ್ರೇರಣೆಗೊಂಡ 7 ವರ್ಷದ ಬಾಲಕಿ ಈ ಘೋರ ಕೃತ್ಯಕ್ಕೆ ಮುಂದಾಗಿರಬೇಕೆಂದು ಶಂಕಿಸಲಾಗಿದೆ. ನ.12 ರಂದೇ ಬಾಲಕಿ ಬೆಂಕಿ ಅನಾಹುತದಿಂದ ಸಾವಿಗೀಡಾಗಿದ್ದಳು. ಆದರೆ ಆಗ ಆಕಸ್ಮಿಕವಾಗಿ ಬೆಂಕಿ ತಗಲಿ ಬಾಲಕಿ ಸಾವನ್ನಪ್ಪಿರುವುದಾಗಿ ದೂರು ದಾಖಲಿಸಿದ್ದ ಪೋಷಕರು ಇದೀಗ ತಮ್ಮ ಮಗಳ ಸಾವಿಗೆ ಧಾರವಾಹಿ ದೃಶ್ಯವೇ ಕಾರಣ ಎನ್ನುತ್ತಿದ್ದಾರೆ.
ಇಷ್ಟು ತಡವಾಗಿ ಇಂತಹದ್ದೊಂದು ಆರೋಪ ಮಾಡಲು ಕಾರಣವೇನೆಂದು ತಿಳಿದುಬಂದಿಲ್ಲ. ನೆರೆಹೊರೆಯವರ ಪ್ರಕಾರ ಮಗುವಿನ ಕುಟುಂಬದವರು ನಂದಿನಿ ಧಾರವಾಹಿ ನೋಡುತ್ತಿದ್ದರಂತೆ. ಆದರೆ ಅದುವೇ ಬಾಲಕಿಯ ಕೃತ್ಯಕ್ಕೆ ಪ್ರೇರಣೆಯಾಯಿತಾ ಎಂಬುದು ಇನ್ನೂ ಗೊಂದಲದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ