ಬಿಜೆಪಿ ಸರ್ಕಾರ ತಂದಿದ್ದ ಕಾಯ್ದೆಗಳಿಗೆ ಎಳ್ಳು ನೀರು..!
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾಯ್ದೆಗಳನ್ನ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆತಂದಿತ್ತು..ಭೂ ಸುಧಾರಣಾ ತಿದ್ದುಪಡಿ ಕಾಯ್ದೆ,ಎಪಿಎಂಸಿ,ಲೇಬರ್ ಲಾ ಕಾನೂನುಗಳನ್ನ ಜಾರಿಗೆ ತಂದಿತ್ತು..ಈ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದಲ್ಲೇ ಹೋರಾಟಗಳು ನಡೆದಿದ್ದವು..ದೆಹಲಿಯಲ್ಲಿ ವರ್ಷಗಟ್ಟಲೆ ಪ್ರತಿಭಟನೆಗಳು ನಡೆದಿದ್ವು..ರೈತರ ಸಾಂಘಿಕ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ವಾಪಸ್ ಪಡೆದಿತ್ತು..ಆದ್ರೆ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ವಾಪಸ್ ಪಡೆದಿರಲಿಲ್ಲ..ಇದೀಗ ಈ ವಿವಾದಿತ ಕಾಯ್ದೆಯನ್ನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದುಕೊಂಡಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಹಿಂದಿನ ಬಿಜೆಪಿಸರ್ಕಾರ ಸಂಘಪರಿವಾರದ ಕೆಲವು ಸಿದ್ಧಾಂತಗಳನ್ನ ಅನುಷ್ಠಾನಕ್ಕೆತರಲು ಮುಂದಾಗಿತ್ತೆಂಬ ಆರೋಪಗಳಿವೆ..ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹೊಡೆಯುವುದು..ವಿವೇಕ ಎಂಬ ಹೆಸರಿನಲ್ಲಿ ಕೊಠಡಿ ನವೀಕರಣದ ಮೂಲಕ ಮುಂದಾಗಿತ್ತು..ಇದಕ್ಕೆ ಕಾಂಗ್ರೆಸ್ ಸರ್ಕಾರ ಎಳ್ಳು ನೀರು ಬಿಟ್ಟಿದೆ..ಯಾವುದೇ ಜಾತಿ ಮತ ಪಂಥಗಳೆನ್ನದೆ ಎಲ್ಲರೂ ಒಟ್ಟಾಗಿರಬೇಕು..ಸಹೋದರತ್ವ ಭಾವನೆ ಬೆಳೆಯಬೇಕು..ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬರಬೇಕೇಂಬ ಹಿನ್ನೆಲೆಯಲ್ಲಿ ಸಂವಿಧಾನದ ಪೀಠಿಕೆಯನ್ನ ಓದುವಂತೆ ಕಡ್ಡಾಯಮಾಡಿದೆ