ಮೇ 5ರವರೆಗೆ ಕೊಪ್ಪಳದಲ್ಲಿ ತೀವ್ರ ಶಾಖದ ಅಲೆ: ಮುನ್ನೆಚ್ಚರಿಕೆ ಸಲಹೆ ಕೊಟ್ಟ ಜಿಲ್ಲಾಡಳಿತ

Sampriya

ಗುರುವಾರ, 2 ಮೇ 2024 (19:58 IST)
ಕೊಪ್ಪಳ: ಭಾರತದ ಹವಾಮಾನ ಇಲಾಖೆ ಪ್ರಕಾರ ಮೇ 5ರ ತನಕ ಜಿಲ್ಲೆಯಾದ್ಯಂತ ತೀವ್ರ ಶಾಖದ ಅಲೆ ಇರಲಿದ್ದು , ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇನ್ನೂ ವಿಪರೀತ ಬಿಸಿಲಿರುವ ಕಾರಣ ಬಿಸಿಲಿನ ಆಘಾತದಿಂದ ಸಂಭವಿಸಬಹುದಾದ ಅಪಾಯಗಳನ್ನು ತಡೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಇಂದು ಹವಮಾನ ಇಲಾಖೆ ಪ್ರಕರಾರ 41 ಡಿಗ್ರಿ ಇತ್ತು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮೇ 1ರಿಂದ 2ರ ಬೆಳಿಗ್ಗೆ 8.30ರ ಅವಧಿಯಲ್ಲಿ ಜಿಲ್ಲೆಯಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದೆ.

ಇನ್ನೂ ಜನರ ಆರೋಗ್ಯದ ಹಿತದೃಷ್ಟಿಯಿಂದ ಜನರು ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಆಗಾಗ ನೀರು ಸೇವನೆ, ಆದಷ್ಟು ಹತ್ತಿ ಬಟ್ಟೆಗಳನ್ನು ಧರಿಸುವುದು, ನೀರಿನ ಅಂಶವುಳ್ಳ ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸುವಂತೆ ತಿಳಿಸಿದೆ.

ಇನ್ನು ಮಕ್ಕಳು, ಹಿರಿಯರು, ಮಧುಮೇಹ ಹಾಗೂ ಬಿಪಿ ಇರುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ