ಕೋಟ್ಯಾಂತರ ರೂಪಾಯಿ ಮೌಲ್ಯದ ಔಷಧ ಪೂರೈಸಿ ವರ್ಷಗಳು ಕಳೆದರೂ ಬಿಲ್ ಪಾವತಿ ಬಾಕಿ ಇದೆ.ಸರಬರಾಜುದಾರರಿಗೆ ಬಿಲ್ ಬಾಕಿ ಪಾವತಿಸದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕಳ್ಳಾಟ ಮಾಡುತ್ತಿರೋದಾಗಿ ಆರೋಪ ಬಂದಿದೆ.ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 600 ಕೋಟಿ ರೂ ಮೊತ್ತದ 733 ಔಷಧಿಗಳಿಗೆ ಬೇಡಿಕೆ ಇದೆ.ಬಾಕಿ ಬಿಲ್ ಗಳ ವಿಲೇವಾರಿ ವಿಳಂಬ ಹಿನ್ನಲೆ ಟೆಂಡರ್ ಗಳಲ್ಲಿ ಭಾಗಿಯಾಗಲು ಕಂಪನಿಗಳು ಹಿಂದೇಟು ಹಾಕಿದೆ.100 ಔಷಧಗಳ ಪೂರೈಕೆ ಮಾಡಿರುವ ಕಂಪನಿಗಳಿಗೆ ನಿಗದಿತ ಸಮಯದಲ್ಲಿ ಪೇಮೆಂಟ್ ಮಾಡಿಲ್ಲ.30 ದಿನಗಳೊಳಗೆ ಬಿಲ್ ಪಾವತಿ ಮಾಡಬೇಕೆಂಬ ನಿಯಮವಿದ್ದರೂ ಅಸಡ್ಡೆ ತೋರಿದೆ.ನಿಗಮದಲ್ಲಿ 90 ಕೋಟಿ ರೂ ಔಷಧ ಹಾಗೂ 40 ಕೋಟಿ ರೂ ವೈದ್ಯಕೀಯ ಉಪಕರಣ ಸೇರಿ ಒಟ್ಟು 130 ಕೋಟಿ ರೂ ಬಾಕಿ ಇದೆ.