ಸಿದ್ದು ಕುರ್ಚಿಯನ್ನೇ ಅಲುಗಾಡಿಸಿದ ಸ್ನೇಹಮಹಿ ಕೃಷ್ಣ ದಿಢೀರ್‌ ಧರ್ಮಸ್ಥಳ ಠಾಣಾ ಮೆಟ್ಟಿಲೇರಿದ್ದೇಕೆ

Sampriya

ಗುರುವಾರ, 21 ಆಗಸ್ಟ್ 2025 (14:29 IST)
ಮಂಗಳೂರು: ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಯನ್ನೇ ಅಲುಗಾಡಿಸಿದ್ದ ಮೈಸೂರಿನ ಸ್ನೇಹಮಹಿ ಕೃಷ್ಣಾ ಇದೀಗ ದಿಢೀರನೇ ಧರ್ಮಸ್ಥಳ ಠಾಣಾ ಮೆಟ್ಟಿಲೇರಿದ್ದಾರೆ. 

ಧರ್ಮಸ್ಥಳ ಪ್ರಕರಣದಲ್ಲಿ  ಸುಜಾತ ಭಟ್ ಅವರನ್ನ ಮುಂದಿಟ್ಟು ಮಹೇಶ್ ಶೆಟ್ಟಿ ತಿಮರೋಡಿ,  ಗಿರೀಶ್ ಮಟ್ಟಣ್ಣನವರ್‌, ಸಮೀರ್ ಎಂಡಿ ಸುಳ್ಳು ಆರೋಪಗಳನ್ನು ಮಾರುತ್ತಿದ್ದಾರೆಂದು ದೂರನ್ನು ನೀಡಿದ್ದಾರೆ.

ಧರ್ಮಸ್ಥಳ ಠಾಣೆಗೆ ಬಂದು ಮೂವರ ವಿರುದ್ಧ ದೂರನ್ನು ನೀಡಿದ್ದಾರೆ. 

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ವಿರುದ್ಧ ಸ್ನೇಹಮಹಿ ಕೃಷ್ಣ ಅವರು ದೂರು ನೀಡಿದ್ದರು. ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನು ಮೂಡಿಸಿತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ