ಪೀಣ್ಯದ ನಿವಾಸಿ ಷಣ್ಮುಗಂ (55) ಇಂತಹ ಕೃತ್ಯ ಎಸಗಿದ ಕಂಪೆನಿ ಮಾಲೀಕ. ಈತ ಪೀಣ್ಯ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸರವಣ ಎಂಜಿನಿಯರಿಂಗ್ ವರ್ಕ್ಸ್ ಕಂಪನಿ ಇಟ್ಟುಕೊಂಡಿದ್ದನು. ಈತನ ಕಂಪೆನಿಯಲ್ಲಿ ಈಗಾಗಲೇ 15 ಮಂದಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲಸಗಾರರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದನು.
ಈ ಹಿನ್ನಲೆಯಲ್ಲಿ ಜಾಹೀರಾತು ನೋಡಿ ಕೆಲಸ ಕೇಳಿಸಿಕೊಂಡು ಬಂದಿದ್ದ ಯುವತಿಯನ್ನು ಸಂಬಳದ ಕುರಿತು ಚರ್ಚಿಸುವ ನೆಪದಲ್ಲಿ ಮನೆಗೆ ಕರೆಸಿಕೊಂಡು ''ನಿಮಗೆ ಕೇಳಿದಷ್ಟು ಸಂಬಳ ಕೊಡುತ್ತೇನೆ. ಮನೆಯಿಂದ ಕಂಪನಿಗೆ ಬರಲು ದ್ವಿಚಕ್ರ ವಾಹನ ಕೊಡಿಸುತ್ತೇನೆ ಎಂದು ಪುಸಲಾಯಿಸಿ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.
ಆಗ ಭಯಬೀತಳಾದ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೋಷಕರಿಗೆ ವಿಷಯ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಆರೋಪಿ ಕಂಪನಿ ಮಾಲೀಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.