ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಚಗೊಳಿಸಿ ಶುದ್ಧವಾಗಿ ತಲೆ ಸ್ನಾನ ಮಾಡಬೇಕು. ದೇವರ ಮನೆಯಲ್ಲಿ ದೀಪಾರಾಧನೆ ಮಾಡಿ ನಂತರ ಆಲದ ಮರದ ಎಲೆಯಲ್ಲಿ ದಾಳಿಂಬೆ ಗಿಡದ ಬೇರಿನ ಸಹಾಯದಿಂದ ಸ್ವಸ್ತಿಕ್ ನ್ನು ಬರೆಯಬೇಕು. ನಂತರ ಅದರ ಮೇಲೆ ಸ್ವಲ್ಪ ಸಬ್ಬಕ್ಕಿಯನ್ನು ಹಾಕಿ ದುರ್ಗಾ ದೇವಿಯ ಪಾದದ ಕೆಳಗಡೆ ಇಡಬೇಕು. ನಂತರ ದೇವಿಗೆ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಬೇಕು.
ನಂತರ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಹೇಳಿಕೊಂಡು ಸಂಕಲ್ಪ ಮಾಡಿ ದೇವಿಯ ಅಷ್ಟೋತ್ತರ ಶತನಾಮಾವಳಿ, ಲಲಿತ ಸಹಸ್ರನಾಮವನ್ನು ಪಾರಾಯಣ ಮಾಡಬೇಕು. ಕೊನೆಗೆ ಆರತಿ ಮಾಡಿ, ನೈವೇದ್ಯ ಪ್ರಸಾದವನ್ನು ಕುಟುಂಬದವರು ಮಾತ್ರ ಸೇವಿಸಬೇಕು. ಹೀಗೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.