ಮಕ್ಕಳನ್ನು ಕಾಡುವ ಜಂತುಹುಳುವಿನ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಮಂಗಳವಾರ, 19 ಫೆಬ್ರವರಿ 2019 (07:26 IST)
ಬೆಂಗಳೂರು : ಮಕ್ಕಳನ್ನು ಕಾಡುವ ಸಮಸ್ಯೆಗಳಲ್ಲಿ ಜಂತುಹುಳದ ಸಮಸ್ಯೆಯು ಒಂದು. ಇದು ಮಕ್ಕಳ ಕರುಳಿನಲ್ಲಿ ಇರುವುದರಿಂದ ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತ ಹೋಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಮನೆಮದ್ದಿನಿಂಲೂ ನಿವಾರಿಸಿಕೊಳ್ಳಬಹುದು.
ಒಂದು ಚಮಚ ಜೇನುತುಪ್ಪದ ಜೊತೆಗೆ ಎರಡು ಚಮಚ ಬಿಲ್ವಪತ್ರೆ ರಸ ಸೇರಿಸಿ ಒಂದು ವಾರಗಳ ಕಾಲ ಸೇವನೆ
ಮಾಡುವುದರಿಂದ ಜಂತುಹುಳು ನಿವಾರಣೆ ಮಾಡಿಕೊಳ್ಳಬಹುದು. 5-6 ಬೆಳ್ಳುಳ್ಳಿಯನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿ ಆ ನೀರನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿನ ಜಂತುಹುಳು ನಿವಾರಣೆಯಾಗುತ್ತದೆ.
ಸಿಹಿ ಕುಂಬಳಕಾಯಿ ಬೀಜದ ಪುಡಿಯನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಜಂತುಹುಳು ಹೊರ ಬೀಳುತ್ತದೆ. ತುಂಬೆಹೂವು ಮತ್ತು ಅದರ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.