ದೂರು ದಾಖಲಿಸಲು ಹೋದ ಮಹಿಳೆ ಮೇಲೆ ಪೊಲೀಸರಿಂದ ಲೈಂಗಿಕ ಕಿರುಕುಳ
ಶನಿವಾರ, 9 ಡಿಸೆಂಬರ್ 2017 (15:31 IST)
ಮಂಡ್ಯ: ಗಂಡ ಮನೆಯಿಂದ ನಾಪತ್ತೆಯಾಗಿರುವುದರ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಹೋದ ಮಹಿಳೆಯ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ನೀಡಿದ ಘಟನೆ ಬ್ಯಾಡರಹಳ್ಳಿ ಪೋಲಿಸ್ ಠಾಣೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಮಹಿಳೆಯೊಬ್ಬರು 6 ವರ್ಷದ ಹಿಂದೆ ಕಿರಣ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು.ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಆಕೆಯ ಗಂಡ ಮನೆ ಬಿಟ್ಟು ಹೋಗಿದ್ದರಿಂದ ಗಾಬರಿಗೊಂಡ ಮಹಿಳೆ ಬ್ಯಾಡರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದರು.
ಆಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಆಕೆಯ ಬಗ್ಗೆ ಅಶ್ಲಿಲವಾಗಿ ಮಾತನಾಡಿ, ಅಸಭ್ಯ ವರ್ತನೆ ತೋರಿದರು.ಇದರಿಂದ ನೊಂದ ಮಹಿಳೆ ಮಂಡ್ಯದ ಎಸ್.ಪಿ ಗೆ ದೂರು ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ