ಸಂಸದ, ಶಾಸಕ ಗೊಡ್ಡೆಮ್ಮೆಗಳು ಎಂದ ಮಾಜಿ ಸಚಿವ

ಸೋಮವಾರ, 24 ಸೆಪ್ಟಂಬರ್ 2018 (17:38 IST)
ದಾವಣಗೆರೆ ಸಂಸದ, ಉತ್ತರ ಶಾಸಕ ಗೊಡ್ಡೆಮ್ಮೆಗಳಾಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.

ಬಿಜೆಪಿಯ ಜಿ. ಎಂ. ಸಿದ್ದೇಶ್ವರ್ ಮತ್ತು ಎಸ್. ಎ. ರವೀಂದ್ರನಾಥ  ಗೊಡ್ಡೆಮ್ಮೆಗಳು ಎಂದು ದಾವಣಗೆರೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಶಾಸಕ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ. ರಿಜೆಕ್ಟೆಡ್ ಗೂಡ್ಸ್ ಎಂಬ ಯಶವಂತ್ ರಾವ್ ಹೇಳಿಕೆಗೆ ಶಾಮನೂರು ಪ್ರತಿಕ್ರಿಯೆ ನೀಡಿದ್ದು, ಅವರೆಲ್ಲ ಗೊಡ್ಡೆಮ್ಮೆಗಳು ಎಂದ ಶಾಮನೂರು ಕಿಡಿಕಾರಿದ್ದಾರೆ.

ಉಸ್ತುವಾರಿ ಸಚಿವರು ಜಿಲ್ಲೆ ಕಡೆಗಣಿಸಿರುವ ಬಗ್ಗೆ ಶಾಮನೂರು ಹೇಳಿಕೆ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಬರದಿದ್ದರೆ ಏನು? ನಾವೇ ಎಲ್ಲವನ್ನ ಅಭಿವೃದ್ಧಿ ಮಾಡುತ್ತೇವೆ ಎಂದು  ಹೇಳಿದ್ದಾರೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ