ದಂಗೆ ಎಂದರೆ ಪ್ರತಿಭಟನೆ ಎಂದ ಸಿಎಂ

ಭಾನುವಾರ, 23 ಸೆಪ್ಟಂಬರ್ 2018 (18:57 IST)
ರಾಜ್ಯ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿರುವುದರ ವಿರುದ್ಧ ದಂಗೆ ಏಳಬೇಕು ಎಂದಿರುವುದು ಪ್ರತಿಭಟನೆ ಎಂದರ್ಥದಲ್ಲಿ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. 

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಿ ಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಜೆಡಿಎಸ್ ನ ಯಾವ ಶಾಸಕರು ಬಿಜೆಪಿಯವರ ಸಂಪರ್ಕದಲ್ಲಿ ಇಲ್ಲ ಎಂದರು.  

ಬಾಂಬೆಗೆ ಹೋಗಿದ್ದಾರೆಂದು ಹೇಳುತ್ತಿರುವ ಶಾಸಕರು ನಮ್ಮೊಂದಿಗೆ ಇದ್ದಾರೆ. ಅವರಲ್ಲೂ ಹೋಗಿಲ್ಲ ಎಂದರು. ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಸಂತೋಷದ ವಿಷಯ ಎಂದ ಅವರು, ರಾಜ್ಯಪಾಲರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇ‌ನೆ ಎಂದು ಹೇಳಿದರು.

ನನ್ನ ದಂಗೆ ಹೇಳಿಕೆಯ ಅರ್ಥ ಪ್ರತಿಭಟನೆ ಎಂದು ಅರ್ಥೈಸಿಕೊಳ್ಳಬೇಕು. ನಾನು ಬಿ.ಎಸ್. ಯಡಿಯೂರಪ್ಪನವರ ಹಾಗೆ ಬೆಂಕಿ ಹಚ್ಚಿಸುವ ಹೇಳಿಕೆ ನೀಡಿಲ್ಲ. ಅವರು ಬೆಂಕಿ ಹಚ್ಚುವ ಹೇಳಿಕೆ ನೀಡಿದ್ರೆ ಅದು ಪ್ರಜಾಪ್ರಭುತ್ವವಾಗುತ್ತದೆ. ನಾನು  ಹೇಳಿದ್ರೆ ಅದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ಎಂದು ವಿರೋಧ ಮಾಡಲಾಗುತ್ತಿದೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ