ಮಂತ್ರಿಗಿರಿಯಿಂದ ತೆಗೆದಿದ್ದ ಶಂಕರ್ ಗೆ ಮತ್ತೆ ಸ್ಥಾನ: ಕಾಂಗ್ರೆಸ್ ಉದ್ದೇಶ ಏನು?

ಶುಕ್ರವಾರ, 14 ಜೂನ್ 2019 (14:25 IST)
ಪಕ್ಷೇತರ ಶಾಸಕ ಶಂಕರ್ ಅವ್ರನ್ನು ಈ ಹಿಂದೆ ಮಂತ್ರಿಗಿರಿಯಿಂದ ತೆಗೆಯಲಾಗಿತ್ತು. ಈಗ ಅದೇ ಶಂಕರ್ ಗೆ ಸಚಿವ ಸ್ಥಾನ ಕೊಡ್ತಿದೀರಿ. ಇದರ ಹಿಂದೆ ಏನಿದೆ ಉದ್ದೇಶ ? ಅಂತ ಬಿಜೆಪಿ ಪ್ರಶ್ನೆ ಮಾಡಿದೆ.

ಯಾರ ಲಾಭಕ್ಕಾಗಿ ಮತ್ತೆ ಶಂಕರ್ ಗೆ ಸಚಿವ ಸ್ಥಾನ ಕೊಡ್ತಿದೀರಿ? ಹೀಗಂತ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ. ತಾವು ಆಡಳಿತಕ್ಕೆ ಬಂದ 24ಗಂಟೆಯೊಳಗೆ ರೈತರ ಸಾಲ ಮನ್ಮಾ ಮಾಡುತ್ತೇವೆ ಎಂದು ಕುಮಾರಸ್ವಾಮಿಯವರು ಧರ್ಮಸ್ಥಳ ಮತ್ತು ಶೃಂಗೇರಿಯಲ್ಲಿ ಹೇಳಿಕೆ ನೀಡಿದ್ದರು.

ಆದರೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ. ಸಾಲ ಮನ್ನಾ ಮಾಡುವುದಾಗಿ ಹೇಳಿ ರೈತರ ಮೂಗಿಗೆ ತುಪ್ಪಹಚ್ಚಿದ್ದಾರೆ. ರೈತರಿಗೆ ಬ್ಯಾಂಕ್ ಗಳಿಂದ ನೊಟೀಸ್ ಬರುತ್ತಿದೆ. ಚುನಾವಣೆ ಆದ ತಕ್ಷಣ ಬ್ಯಾಂಕಿಗೆ ಕೊಟ್ಟ ಹಣವನ್ನೂ ವಾಪಸ್ ಪಡೆದು ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದ್ರು.

ಬರಗಾಲ ಮತ್ತು ಅತಿವೃಷ್ಟಿಗೆ  ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ 7182 ಕೋಟಿ ರೂ.ಕೊಟ್ಟಿದೆ. ಅದನ್ನು ರಾಜ್ಯ ಸರ್ಕಾರ ಬಳಕೆಯೇ ಮಾಡಿಲ್ಲ. ಕೊಡಗಿನ ಮರು ನಿರ್ಮಾಣಕ್ಕೆ ಎಕರೆಗೆ 37,000 ರೂ. ನಂತೆ ಪರಿಹಾರ ಕೊಟ್ಟಿದ್ದು ಎನ್ ಡಿ ಆರ್ ಎಫ್ ಹಣ. ರಾಜ್ಯ ಸರ್ಕಾರದ ಬಳಿ ಜಿಲ್ಲಾಧಿಕಾರಿ ಬಳಿ 127 ಕೋಟಿ ರೂ. ಇದೆ.ಆದರೆ ಪರಿಹಾರ ಮಾತ್ರ ಕೊಡುತ್ತಿಲ್ಲ ಎಂದು ಕಿಡಿಕಾರಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ