ವಿಷ ಆಹಾರ ಸೇವಿಸಿ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಲಬುರ್ಗಿ ಹೊರವಲಯದ ಸರ್ಕಾರಿ ಉಗ್ರಾಣದ ಬಳಿ ವಿಷ ಆಹಾರ ಸೇವಿಸಿ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಗ್ರಾಣದ ಪಕ್ಕದಲ್ಲಿ ಮೇಯಿಸುವ ವೇಳೆ ಮೇವು ತಿಂದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತದೆ.
ಸುರಪುರ ತಾಲೂಕಿನ ಅಮ್ಮಾಪುರ ನಿವಾಸಿ ರಾಯಪ್ಪ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಉಗ್ರಾಣದಲ್ಲಿ ಶೇಖರಿಸಿಟ್ಟ ದವಸ-ಧಾನ್ಯಗಳ ರಕ್ಷಣೆಗಾಗಿ ಬಳಸಿದ ವಿಷ ಪಸರಿಸಿ ಘಟನೆ ನಡೆದಿರಬಹುದು ಎನ್ನಲಾಗುತ್ತದೆ.
ಅಂದಾಜು 2.5 ಲಕ್ಷ ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.