ಡ್ಯಾನ್ಸ್ ಮಾಡುತ್ತಿದ್ದ ಯುವಕ ಇದ್ದಕ್ಕಿದ್ದಂತೆ ಸತ್ತಿದ್ದು ಹೇಗೆ ಗೊತ್ತಾ?
ಆ ಯುವಕ ಸಂಭ್ರಮದಿಂದ ಡ್ಯಾನ್ಸ ಮಾಡುತ್ತಿದ್ದ, ಗೆಳೆಯರೊಂದಿಗೆ ಸಂತಸದಿಂದ ಡ್ಯಾನ್ಸ್ ಮಾಡುತ್ತಿದ್ದ. ಖುಷಿಯಲ್ಲಿದ್ದ ಯುವಕ ಏಕಾಏಕಿಯಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ವೇಳೆ ಯುವಕನೊಬ್ಬ ಸಾವೀಗಿಡಾಗಿದ್ದಾನೆ. ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕ ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆ ನಡೆದಿದೆ. ಕೊಪ್ಪಳದ ಗಂಗಾವತಿಯ ಹಣವಾಳ ಗ್ರಾಮದಲ್ಲಿ ಘಟನೆ ನಡೆದಿದೆ.
ರಾಘವೇಂದ್ರ ಪೊಲೀಸ್ ಪಾಟೀಲ್ (33) ಸಾವನ್ನಪ್ಪಿದ ಯುವಕನಾಗಿದ್ದಾನೆ. ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ವೇಳೆ ಘಟನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ್ದಾನೆ.
ಯುವಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.