ಡಿ.ವಿ.ಸದಾನಂದಗೌಡ, ಆರ್.ಅಶೋಕ್ ನಡುವೆ ಶೀಥಲ ಸಮರ

ಮಂಗಳವಾರ, 12 ಡಿಸೆಂಬರ್ 2017 (08:26 IST)
ಬಿಜೆಪಿ ಪಕ್ಷದಲ್ಲಿ ಒಕ್ಕಲಿಗ ನಾಯಕರಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರು ಪ್ರಾಬಲ್ಯ ಉಳಿಸಿಕೊಳ್ಳಲು ಬೆಂಗಳೂರಿನ ಸಭೆಗಳಿಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ದೂರವಿಡಲಾಗಿದೆ ಎಂಬ ಅಸಮಾಧಾನವನ್ನು ರಾಷ್ಟ್ರೀಯ ನಾಯಕರಲ್ಲಿ ತೋಡಿಕೊಳ್ಳಲಾಗಿದೆ ಎನ್ನಲಾಗಿದೆ.ಇದು ಇಬ್ಬರ ನಡುವೆ ಶೀಥಲ ಸಮರಕ್ಕೆ ಕಾರಣವಾಗಿದೆ.

ಮೊದಲಿನಿಂದಲೂ ಬೆಂಗಳೂರು ಮಟ್ಟಿಗೆ ಆರ್.ಅಶೋಕ ಅವರು ಒಕ್ಕಲಿಗ ನಾಯಕರಾಗಿ ಪ್ರಾಬಲ್ಯ ಹೊಂದಿದ್ದಾರೆ. ಡಿ.ವಿ.ಸದಾನಂದ ಗೌಡ ಅವರು ಕೇಂದ್ರ ಸಚಿವರಾಗಿದ್ದರೂ ಯಾವುದೇ ಸಭೆಗಳಿಗೆ ಆರ್.ಅಶೋಕ ದೂರವಿರಿಸಿದ್ದಾರೆ ಎಂಬ ಅಸಮಾಧಾನವನ್ನು ಡಿ.ವಿ.ಸದಾನಂದಗೌಡ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರದಿಂದ ಡಿ.ವಿ.ಸದಾನಂದಗೌಡ ಹಾಗೂ ಆರ್.ಅಶೋಕ ಅವರ ನಡುವೆ ಶೀಥಲ ಸಮರಕ್ಕೆ ಕಾರಣವಾಗಿದೆ.

ಈಚೆಗೆ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಕೂಡ ಆರ್.ಅಶೋಕ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ರಾಷ್ಟ್ರೀಯ ನಾಯಕರಲ್ಲಿ ಪ್ರಸ್ತಾಪಿಸಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ