ಕೆಲ ಬಿಜೆಪಿ ನಾಯಕರ ಅಸಮಾಧಾನದ ಮಧ್ಯೆ ಪರಿವರ್ತನಾ ಯಾತ್ರೆ

ಸೋಮವಾರ, 11 ಡಿಸೆಂಬರ್ 2017 (20:06 IST)
ಜಗದೀಶ್ ಕುಂಬಾರ
 
ಕಳೆದ ನಾಲ್ಕೈದು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಇಂದು ಮುಕ್ತಾಯಗೊಂಡಿತು. 
ಅಫಜಲಪೂರ ವಿಧಾನ ಸಭಾ  ಮತಕ್ಷೇತ್ರದಿಂದ ಆರಂಭಗೊಂಡ ಯಾತ್ರೆ ಇಂದು ಜೇವರ್ಗಿಯಲ್ಲಿ ಮುಕ್ತಾಯಗೊಂಡಿತು. ಜೇವರ್ಗಿ ಪಟ್ಟಣದಲ್ಲಿ ನಡೆದ ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿದ ಬಿಎಸ್ ವೈ, ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ಈ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಆಗೋವವರೆಗೂ ಅಚ್ಚೆ ದಿನ್ ಬರೋದಿಲ್ಲ. ಕಲ್ಯಾಣ ಕರ್ನಾಟಕ ಆಗೋದಿಲ್ಲ ಅಂತ ಗುಡುಗಿದ್ದಾರೆ.
 
ಹೈದ್ರಾಬಾದ ಕರ್ನಾಟಕ ಪ್ರದೇಶದ ಹೆಬ್ಬಾಗಿಲಾಗಿರುವ ಕಲಬುರಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಹೇಗಾದ್ರೂ ಭದ್ರಕೋಟೆ ಛಿದ್ರಗೊಳಿಸಲು ಅಣಿಯಾಗಿ ನಿಂತಿರುವ ಬಿಜೆಪಿ,  ಕಳೆದ ನಾಲ್ಕೈದು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿತ್ತು. 
 
ಕಲಬುರಗಿಯ ಜಿಲ್ಲೆಯ ಎಲ್ಲಾ 9 ವಿಧಾನ ಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ನಡೆಸುವ ಮೂಲಕ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಬಿಎಸ್ ವೈ ಮನವಿ ಮಾಡಿದ್ರೆ, ಕಲಬುರಗಿ ದಕ್ಷಿಣ ಮತಕ್ಷೇತ್ರ ಬಿಟ್ರೆ ಎಲ್ಲಿಯೂ ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಮಾಡಲಿಲ್ಲ.
 
ಒಟ್ಟಾರೆಯಾಗಿ ಪಕ್ಷದ ಮುಖಂಡರಲ್ಲಿ ಗೊಂದಲಗಳು ಇದ್ದರೂ ಬಿಜೆಪಿ ಪರಿವರ್ತನಾ ಯಾತ್ರೆ ಜಿಲ್ಲೆಯಲ್ಲಿ ಸಮಾರೋಪಗೊಂಡಿದೆ. ಆದ್ರೆ ಈಶಾನ್ಯ ಪದವೀಧರರ ಮತಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮರನಾಥ ಪಾಟೀಲ್ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳದೇ ತಮ್ಮ ಅಸಮಾಧಾನ ಪ್ರದರ್ಶಿಸಿದ್ದು ಎದ್ದು ಕಾಣುತಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ