ಬೆಂಗಳೂರು: ಊಟದ ಕೊನೆಯಲ್ಲಿ ಒಂಚೂರು ಮಜ್ಜಿಗೆ ಕುಡಿಯುವುದು ಸಾಮಾನ್ಯ. ಹೀಗೆ ಮಜ್ಜಿಗೆ ಕುಡಿಯುವುದರಿಂದ ಎಷ್ಟೊಂದು ಆರೋಗ್ಯಕರ ಲಾಭವಿದೆ ಗೊತ್ತಾ?
ಮಜ್ಜಿಗೆ ದಾಹ ತಣಿಸುವುದಷ್ಟೇ ಅಲ್ಲ, ಇದರಿಂದ ತೆರೆದ ಗಾಯ, ಬಾಯಿ ಹುಣ್ಣು, ರಕ್ತಸ್ರಾವ ನಿಯಂತ್ರಿಸಬಹುದು. ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆಯಲ್ಲೂ ಮಜ್ಜಿಗೆಯ ಬಳಕೆಯಿದೆಯಂತೆ.
ಮಜ್ಜಿಗೆಯಲ್ಲಿ ಖನಿಜಾಂಶಗಳು ಸಾಕಷ್ಟು ಇದೆ. ಹೀಗಾಗಿ ಅನಿಮೀಯಾ, ಮಾನಸಿಕ ಒತ್ತಡ ನಿಭಾಯಿಸುವ ಗುಣವಿದೆ. ಹಾಗೆಯೇ ಮಜ್ಜಿಗೆಯಲ್ಲಿರುವ ಪೊಟೇಶಿಯಂ ಅಂಶ ರಕ್ತದೊತ್ತಡ ಕಡಿಮೆಗೊಳಿಸುತ್ತದೆ.
ಅಷ್ಟೇ ಅಲ್ಲ, ಮಜ್ಜಿಗೆ ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೊಬ್ಬಿನಂಶ ಕರಗಿಸುತ್ತದೆ. ಹಾಗೆಯೇ ಹೊಟ್ಟೆಯುರಿ, ಎದೆಯುರಿ, ಅಜೀರ್ಣವಾದರೂ ಮಜ್ಜಿಗೆ ಸೇವಿಸಬಹುದು. ಮಜ್ಜಿಗೆಯನ್ನು ನಿಂಬೆ ರಸದೊಂದಿಗೆ ಸೇವಿಸುವುದರಿಂದ ತಲೆ ನೋವು ಮತ್ತು ರಕ್ತದೊತ್ತಡ ನಿವಾರಣೆಯಾಗುತ್ತದೆ.
ಮಜ್ಜಿಗೆಗೆ ಶುಂಠಿ ರಸ ಮತ್ತು ಉಪ್ಪು ಸೇರಿಸಿ ಸೇವಿಸುವುದರಿಂದ ವಾಂತಿ ಉಪಶಮನವಾಗುತ್ತದೆ. ಸಕ್ಕರೆ ಖಾಯಿಲೆ ಇರುವವರಂತೂ ಪ್ರತಿದಿನ ಮಜ್ಜಿಗೆ ಕುಡಿದರೆ ಉತ್ತಮ. ಮಜ್ಜಿಗೆಗೆ ಎಷ್ಟೊಂದು ಶಕ್ತಿಯಿದೆ ನೋಡಿ..!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ