ಜಿಲ್ಲಾಡಳಿತ ಕಣ್ಣುತಪ್ಪಿಸಿ ಬಾಣಂತಿ, ಮಗು ನೋಡಲು ಬಂದವನಿಗೆ ಕೊರೊನಾ
ತನ್ನ ಪತ್ನಿ ಹಾಗೂ ಮಗುವನ್ನು ನೋಡಲು ಮುಂಬೈನಿಂದ ಬೈಕ್ ಮೇಲೆ ಬಂದಿದ್ದ ವ್ಯಕ್ತಿಗೆ ಕೊರೊನಾ ತಗುಲಿದೆ.
ಮುಂಬೈನಿಂದ ಬೈಕ್ ಮೇಲೆ ಬಂದಿದ್ದ ಆಸಾಮಿ ಜಿಲ್ಲಾಡಳಿತ ಕಣ್ಣು ತಪ್ಪಿಸಿ ಒಳದಾರಿಯಿಂದ ಬಂದಿದ್ದನು. ಬಾಣಂತಿ ಹೆಂಡತಿ, ಮಗುವನ್ನು ನೋಡಲು ಬೈಕ್ ಮೇಲೆ ಬಂದಿದ್ದನು.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ಮೂಲದ ವ್ಯಕ್ತಿಯು ವಿಜಯಪುರದ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ತೋಟದ ಮನೆಗೆ ರಾತ್ರಿ ಬಂದಿದ್ದನು.
ಮಾಹಿತಿ ಆಧರಿಸಿ ಕ್ವಾರಂಟೈನ್ ಮಾಡಲಾಗಿತ್ತು. ಆತನಿಗೆ ಈಗ ಕೊರೊನಾ ಪಾಸಿಟಿವ್ ದೃಢವಾಗಿದೆ.