ಶಿಲ್ಪಾ ಶೆಟ್ಟಿಗೆ ಕಟೀಲು ದೇವರ ಮುಂದೆ ಸೆಲ್ಫೀ ತೆಗೆಯಲೂ ಅವಕಾಶವಿದೆ, ಜನಸಾಮಾನ್ಯರಿಗೆ ದರ್ಶನವೂ ಕಷ್ಟ

Sampriya

ಸೋಮವಾರ, 3 ಮಾರ್ಚ್ 2025 (17:39 IST)
Photo Courtesy X
ಮಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಈಚೆಗೆ  ತಮ್ಮ ತಾಯಿ, ಸಹೋದರಿ ಶಮಿತಾ ಶೆಟ್ಟಿ ಹಾಗೂ ಇಬ್ಬರು ಮಕ್ಕಳ ಜತೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ  ಭೇಟಿ ನೀಡಿದರು.

ಈ ವೇಳೆ ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿ, ಗರ್ಭಾಗುಡಿಯ ಎದು ಫ್ಯಾಮಿಲಿ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೆ ದೇವಿಯ ಪೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.  ಈ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಈ ಮೂಲಕ ಶಿಲ್ಪಾ ಶೆಟ್ಟಿ ವಿವಾದಕ್ಕಿಡಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ದೇವಸ್ಥಾನದ ಒಳಗಡೆ ತೆಗೆದ ಫೋಟೋವನ್ನು ಶೇರ್ ಮಾಡಿ, ದೇವಸ್ಥಾನದಲ್ಲಿ ಸೆಲೆಬ್ರಿಟಿಗಳಿಗೆ ಹಾಗೂ ಸಾಮಾನ್ಯ ಭಕ್ತರಿಗೆ ಒಂದು ನಿಯಮವೇ ಎಂದು ಪ್ರಶ್ನೆ ಮಾಡಿದ್ದಾರೆ.

ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಭಕ್ತರಿಗೆ ನಿಯಮಗಳು ವಿಭಿನ್ನವಾಗಿಯೇ ಎಂಬ ಪ್ರಶ್ನೆ ಹಾಕಿದ್ದಾರೆ.  ಈ ಘಟನೆಯನ್ನು ಖಂಡಿಸಿ ಕೆಲ ಭಕ್ತರು ದೇವಾಲಯದ ಆಡಳಿತವನ್ನು ಟೀಕೆ ಮಾಡಿದ್ದಾರೆ.  

ಸಾಮಾನ್ಯ ಭಕ್ತರು ಗರ್ಭಗುಡಿಯ ಎದುರು ನಿಂತು ಕೆಲ ಕ್ಷಣ ಪ್ರಾರ್ಥನೆ ಮಾಡಲು ಸಹ ಅವಕಾಶ ನೀಡುವುದಿರಲ್ಲ. ಆದರೆ ಸೆಲೆಬ್ರಿಟಿಗಳು ಬಂದಾಗ ಎದುರು ನಿಂತು ಪೋಟೋ ತೆಗೆಯಲು, ಅವರ ಮೊಬೈಲ್‌ನಲ್ಲಿ ದೇವಿಯ ಪೋಟೋವನ್ನು ತೆಗೆಯಲು ಹೇಗೆ ಅವಕಾಶ ನೀಡಲಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ