ಶಿರಾಡಿಘಾಟ್ ರಸ್ತೆ ಲೋಕಾರ್ಪಣೆ

ಭಾನುವಾರ, 15 ಜುಲೈ 2018 (18:22 IST)
ರಾಜಧಾನಿ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್  ರಸ್ತೆಯನ್ನು ಲೋಕಾರ್ಪಣೆ ಮಾಡಲಾಯಿತು. ಸಕಲೇಶಪುರ ತಾಲೂಕು ಕೆಂಪುಹೊಳೆ ಜಂಕ್ಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ, ವಸತಿ ಸಚಿವ ಯು.ಟಿ.ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್
ಮೊದಲಾದವರು ಶಿರಾಡಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.

ಶಿರಾಡಿಘಾಟ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಒಟ್ಟು 26 ಕಿಮೀ ಉದ್ದದ ಶಿರಾಡಿಘಾಟ್ ರಸ್ತೆಯ ಮೊದಲ ಹಂತದ 13 ಕಿಮೀ ಕಾಂಕ್ರೀಟ್ ಕಾಮಗಾರಿ ಮೂರು ವರ್ಷಗಳ ಹಿಂದೆ ಪೂರ್ಣಗೊಂಡಿತ್ತು. ಅದಾದ ಬಳಿಕ 2ನೇ ಹಂತದ 12.38 ಕಿಮೀ ಉದ್ದದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು  ಕಳೆದ ಜನವರಿ 20 ರಿಂದ ಕೈಗೆತ್ತಿಕೊಳ್ಳಲಾಗಿತ್ತು. ಆಗಿನಿಂದಲೂ ಈ ಮಾರ್ಗದ ಸಂಚಾರ ಬಂದ್ ಆಗಿ ಕರಾವಳಿ ಭಾಗಕ್ಕೆ ಹೋಗುವವರು ಸುತ್ತಿ ಬಳಸಿ ಪ್ರಯಾಣ ಮಾಡಬೇಕಿತ್ತು. ಕೊನೆಗೂ ಮಳೆಯ ಅಡೆ ತಡೆ ನಡುವೆಯೂ ಸುಮಾರು 74 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಲೋಕಾರ್ಪಣೆ ಮಾಡಲಾಯಿತು.

ರಸ್ತೆ ಉದ್ಘಾಟನೆ ನಂತರ ಮಾತನಾಡಿದ ಸಚಿವ ಯು.ಟಿ.ಖಾದರ್, ಒಟ್ಟು 26 ಕಿಮೀ ಉದ್ದರ ಶಿರಾಡಿಘಾಟ್ ರಸ್ತೆ ಪೂರ್ಣವಾಗಿ ಜನ ಬಳಕೆಗೆ ಮುಕ್ತವಾಗಿರುವುದು ಖುಷಿ ತಂದಿದೆ ಎಂದರು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಾಕಿ ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಶೀಘ್ರವೇ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಇದೇ ರೀತಿ ಹಾಸನದಿಂದ ಸಕಲೇಶಪುರ ಮತ್ತು ಗುಂಡ್ಯಾದಿಂದ ಮಂಗಳೂರಿನ ಬಿಸಿ ರೋಡ್ ವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿಯನ್ನೂ ತ್ವರಿತವಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಆದೇಶ ಮಾಡಲಾಗಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ