ಶೀರೂರು ಮಠದ ಬಾವಿಯಲ್ಲಿ ಅಡಗಿತ್ತಾ ಸುಳಿವು?!
ಕೃಷ್ಣ ಮಠ ಮತ್ತು ಶೀರೂರು ಮಠದ ಬಳಿಯ ಬಾವಿಯಲ್ಲಿ ಶೋಧ ನಡೆಸಿದ ಪೊಲೀಸರಿಗೆ ಕೆಲವು ವಸ್ತುಗಳು ಸಿಕ್ಕಿದ್ದು, ಇದನ್ನು ತನಿಖೆಗಾಗಿ ಚೀಲದಲ್ಲಿ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ ಬಾವಿಯೊಳಗೆ ಮದ್ಯದ ಬಾಟಲಿಗಳೂ ಸಿಕ್ಕಿವೆ ಎನ್ನಲಾಗಿದೆ.
ಆದರೆ ತನಿಖೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಸೋರಿಕೆಯಾಗದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಮಠದ ಸಿಸಿಟಿವಿ ಫೂಟೇಜ್ ಗಳನ್ನೂ ಪೊಲೀಸರು ಪಡೆದಿದ್ದಾರೆಎನ್ನಲಾಗಿದೆ. ಶ್ರೀಗಳ ಅನುಮಾಸ್ಪದ ಸಾವಿನ ಬಗ್ಗೆ ಇನ್ನೂ ತನಿಖೆ ಮುಂದುವರಿಯುತ್ತಿದೆ.