ಫುಡ್ ಪಾಯಿಸನ್ ಅಥವಾ ಫುಡ್ ಗೆ ಪಾಯಿಸನ್- ಯಾವುದು ಸತ್ಯ..? ಶಿರೂರು ಶ್ರೀಗಳ ಸಾವಿನ‌ ಸುತ್ತ!

ಗುರುವಾರ, 19 ಜುಲೈ 2018 (15:00 IST)
 
ಮೊನ್ನೆ ಮೊನ್ನೆಯಷ್ಟೆ ಭಕ್ತರೊಂದಿಗೆ ವನಮಹೋತ್ಸವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಸ್ವಾಮೀಜಿ, ಇಂದು ರಕ್ತ ವಾಂತಿಮಾಡಿ ಸತ್ತಿದ್ದಾರೆ ಅಂದ್ರೆ ನಮಗೆ ನಂಬಲು ಸಾಧ್ಯವಾಗ್ತನೇಇಲ್ಲ. ಮೂಲ ಶಿರೂರುಮಠದಲ್ಲಿ ಶನಿವಾರದಂದು ಮುಖ್ಯಪ್ರಾಣನ ಪೂಜೆಗೈಯ್ದು ಭಕ್ತರಿಗೆ ಪ್ರಸಾದ ಹಂಚಿದಾಗ ಸ್ವಾಮೀಜಿ ಲವಲವಿಕೆ ನೋಡಿದ್ರೆ ಇನ್ನೂ ನೂರು ವರ್ಷ ಬಾಳೋ ಚೈತನ್ಯ ಅವರಲ್ಲಿ ಕಂಡು ಬಂದಿತ್ತು. ಅದ್ರೆ ನಿನ್ನೆ ಬಂದ  ಸಾವಿನ ಸುದ್ದಿ ನಿಜವಾಗಲ ಭಕ್ತರ ಎದೆ ಬಡಿತ ನಿಲ್ಲಿಸುವಂತಿತ್ತು.
 
ಗಟ್ಟಿಮುಟ್ಟಾಗಿದ್ದ ಸ್ವಾಮೀಜಿ ಇದ್ದಕ್ಕಿದ್ದಂತೆ ರಕ್ತ ವಾಂತಿಮಾಡಿ ಸಾಯಲು ಕಾರಣವೇನು..? ಫುಡ್ ಪಾಯಿಸನ್ ಅಗಿದ್ದು ಹೇಗೆ ಅನ್ನೊಪ್ರಶ್ನೆಗಳು ಹಾಗೂ ಸಂಶಯಗಳು ಭಕ್ತರ ವಲಯದಿಂದ ಕೇಳಿ ಬರ್ತಾ ಇವೆ. ನಿನ್ನೆ ದಿನಶಿರೂರು ಶ್ರೀಗಳು ತನ್ನಪಟ್ಟದ ದೇವರನ್ನ ವಾಪಸ್ ಕೊಡುವಂತೆ ಕೋರ್ಟ್ ಮೆಟ್ಟಿಲೇರಬೇಕಿತ್ತು. ಅದ್ರೆ ದುರಂತವೆಂದ್ರೆ ಕೋರ್ಟ್ ಹೋಗಬೇಕಾದವರುಮಸಣ ಸೇರಿದ್ದಾರೆ. ಹಾಗಾದ್ರೆ ಫುಡ್ ಪಾಯಿಸನ್ ಅಗಿದೆಯಾ ಅಥವಾ ಫುಡ್ ಗೆ ಪಾಯಿಸನ್ ಹಾಕಿದ್ದಾರಾ? ಎನ್ನುವ ಸಂಶಯ ಮತ್ತೆ ಗಟ್ಟಿಯಾಗ್ತಿದೆ.

ಕಳೆದ ಕೆಲವು ತಿಂಗಳ ಹಿಂದೆ ಅಷ್ಟ ಮಠಗಳ ಸ್ವಾಮೀಜಿಗಳ ಚರಿತ್ರೆ ಅಲ್ಪ ಸ್ವಲ್ಪ ಮಾಧ್ಯಮದ ಮುಂದೆ ಹೊರ ಹಾಕಿದ ಶಿರೂರು ಶ್ರೀಗಳಿಗೆ ಅಂದೇ ಜೀವ ಬೆದರಿಕೆ ಇತ್ತು. ಅದ್ರೆ ಅದ್ಯಾವದಕ್ಕೂ ಕ್ಯಾರೆ ಅನ್ನದ ಸ್ವಾಮೀಜಿಯನ್ನ ಮುಟ್ಟೊದಕ್ಕೂ ಸಾಧ್ಯ ಇಲ್ಲ ಅಂತಾ ಅರಿತಾಗ, ಇವರನ್ನ  ಅಷ್ಟ ಮಠದಿಂದಲೇ ಹೊರ ಹಾಕುವ ಪ್ಲಾನ್ ನಡೆದಿತ್ತು.

ರಾತೋರಾತ್ರಿ ಮಠಾಧೀಶರು ಗುಪ್ತ ಸಭೆ ನಡೆಸಿದ್ರು. ಅದರಂತೆ ನಡೆದ ಪ್ಲಾನ್ ಇರಬಹುದಾ? ಪುಡ್ ಪಾಯಿಸನ್ ಅನ್ನೊ ಸಂಶಯ ಶಿರೂರು ಶ್ರೀಗಳ ಸಾವಿನಿಂದ ಭಕ್ತರಲ್ಲಿ ಬಲವಾಗ್ತಾ ಇದೆ. ಅಷ್ಟೇ ತಾನು ನಂಬಿದ್ದ ಅಷ್ಟ ಮಠಾಧೀಶರೊಬ್ಬರಲ್ಲಿ ಒಬ್ಬರು  ಪೂಜೆ ಮಾಡಲು ಕೊಂಡೊಯ್ದಿದ್ದ ಪಟ್ಟದ ದೇವರನ್ನ ವಾಪಸ್ ಕೊಡದೆ ಸತಾಯಿಸಿದ್ದು ಮಾಸ್ಟರ್ ಪ್ಲಾನಿನ ಭಾಗವಾಗಿತ್ತು. ಅಷ್ಟೇ ಅಲ್ಲ ಶಿರೂರು ಶ್ರೀ ಶಿಷ್ಯ ಸ್ವೀಕಾರ ಮಾಡುವಂತೆಯೂ,ಮಠ ಬಿಟ್ಟು ಹೋಗುವಂತೆಯೂ ಷರತ್ತುಗಳನ್ನುಕೂಡ ಇತರ ಸ್ವಾಮೀಜಿಗಳು ಹಾಕಿದ್ದರು. ಅದ್ರೆ ಇದಕ್ಕೆ ಒಪ್ಪದ ಶಿರೂರು,  ನನಗೆ ವಯಸ್ಸಾಗಿಲ್ಲ. ಹೀಗಾಗಿ ಸಮಯ ಬಂದಾಗ ಶಿಷ್ಯ ಸ್ವೀಕಾರಮಾಡ್ತೇನೆ ಅನ್ನೊಖಡಕ್ ಉತ್ತರನೀಡಿದ್ದರು. ಹೀಗಾಗಿ ಅಷ್ಟಮಠಾಧೀಶರ ಮಾಸ್ಟರ್ ಪ್ಲಾನ್ ಠುಸ್ ಅಗಿತ್ತು.

ಮಧ್ವ ಸಂಪ್ರದಾಯದ ಸನ್ಯಾಸ ಪದ್ದತಿ ಚ್ಯುತಿ ತಂದಿದ್ದಾರೆ ಅನ್ನೋದಾದ್ರೆ. ಮಧ್ವ ಸಂಪ್ರದಾಯದ ಅಷ್ಟ ಮಠಗಳಿಗೆ ಅವರ ಸಂಪ್ರದಾಯದ ಲಿಖಿತ ಸಂವಿಧಾನವೇ ಇಲ್ಲ ಅನ್ನೊದು ಸತ್ಯ ವಿಚಾರ. ಬಗ್ಗೆ ಲಿಖಿತ ಸಂವಿಧಾನವಾಗಬೇಕು ಅನ್ನೊದು ಪೇಜಾವರ ಮಠದಿಂದ ಹೊರ ಹಾಕಲ್ಪಟ್ಟಿರುವ ವಿಶ್ವ ವಿಜಯ ಶ್ರೀಗಳ ವಾದ. ಬಗ್ಗೆ ಉಡುಪಿ ನ್ಯಾಯಲಯದಲ್ಲಿ ದಾವೆ ಕೂಡ ಹೂಡಲಾಗಿದೆ. ಅದ್ರೆ ಲಿಖಿತ ಸಂವಿಧಾನ ಮಾಡಲು ಯಾವುದೇ ಮಠದ ಶ್ರೀಗಳು ಸಿದ್ದರಿಲ್ಲ. ಹೀಗಾಗಿ ಶಿರೂರು ಶ್ರೀಗಳು ಕೋರ್ಟಿಗೆ ಹೋದದ್ದೇ ಅದಲ್ಲಿ,ಅಷ್ಟ ಮಠಗಳಿಗೆ ವಾದ ಮಾಡಲು ಯಾರಲ್ಲು ಯಾವುದೇ ಸೂಕ್ತ ದಾಖಲೆಗಳು ಇರಲಿಲ್ಲ ಅನ್ನೊದು ಸತ್ಯ ಸಂಗತಿ. ಕೋರ್ಟಲ್ಲಿ ಇನ್ನಷ್ಟು ಸತ್ಯ ಸಂಗತಿಗಳು ಹೊರ ಬರುವ ಸಾಧ್ಯತೆಗಳು ಕೂಡ ಇತ್ತು. ಇದರಿಂದ ಅಷ್ಟ ಮಠಗಳ ಗೌರವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಇತ್ತು. ಆದ್ರೆ ದುರಂತವೆಂದ್ರೆ ಕೋರ್ಟ್ ಮೆಟ್ಟಿಲೇರಬೇಕಾದ ಶಿರೂರು ಶ್ರೀ ಸಾವನ್ನಾಪ್ಪಿದ್ದಾರೆ.

ಲಕ್ಷಾಂತರ ಮಂದಿ ಭಕ್ತರವರ್ಗವನ್ನು ಹೊಂದಿರುವ ಶಿರೂರು ಶ್ರೀಗಳು ಎಲ್ಲರಿಗೂ ತುಂಬಾ ಪ್ರೀತಿ ಪಾತ್ರರಾಗಿದ್ದರು. ಶ್ರೀಗಳ ಸಾವಿನ ಬಗ್ಗೆ ಭಕ್ತರಿಗೆ ಸಹಜವಾಗಿಯೇ ಸಂಶಯ ಇತ್ತು. ಇದಕ್ಕೆ ಪುಷ್ಟಿ ಎಂಬಂತೆ ಕೆ ಎಂ ಸಿ ಹಿರಿಯ  ವೈದ್ಯಧಿಕಾರಿಗಳು ಕೂಡಾ ರಕ್ತದಲ್ಲಿ ವಿಷ ಪಾಷಣ ಬೆರೆತು ಸಾವನಪ್ಪಿದ್ದಾರೆ ಎಂಬ ಹೇಳಿಕೆ ನೀಡಿದ್ದು ಭಕ್ತರ ಅನುಮಾನಕ್ಕೆ ಬಲವಾದ ಸಾಕ್ಷಿ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ