ಶಿರೂರಿನಲ್ಲಿ ಗುಡ್ಡ ಕುಸಿತವಾದ ಕಾರಣ ಹಲವರು ಸಾವನ್ನಪ್ಪಿದ್ದಲ್ಲದೆ, ಜನವಸತಿ ಪ್ರದೇಶ ನಿರ್ನಾಮವಾಗಿತ್ತು. ಈಗಲೂ ಕೇರಳದ ಲಾರಿ ಡ್ರೈವರ್ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಸಂಸತ್ ನಲ್ಲೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಘಟನೆ ಬಗ್ಗೆ ಮಾತನಾಡಿದ್ದರು.
ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಪ್ರಾಕೃತಿಕವಾಗಿರುವ ಒಳಚರಂಡಿ ನೀರಿನ ವ್ಯವಸ್ಥೆಗೆ ತೊಂದರೆಯಾಗಿದೆ. ಇದರಿಂದಾಗಿ ಇಳಿಜಾರು ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪದಿಂದ ತೊಂದರೆ ಉಂಟಾಗಿ ಘಟನೆ ಸಂಭವಿಸಿದೆ ಎಂದು ವರದಿ ನೀಡಿದೆ. ಜೊತೆಗೆ ಈ ಸಂದರ್ಭದಲ್ಲಿ ಭಾರೀ ಮಳೆಯಾಗಿರುವುದು ಘಟನೆ ನಡೆಯಲು ಕಾರಣವಾಯಿತು ಎಂದಿದೆ. ಈ ವರದಿಯಿಂದ ಈಗ ಅವೈಜ್ಞಾನಿಕವಾಗಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಬಂದಿದೆ.