ಮಂಗಳೂರು-ಬೆಂಗಳೂರು ನಡುವಿನ ರೈಲು ರದ್ದಾಗಿಲ್ಲ, ಬದಲಿ ಮಾರ್ಗದ ವಿವರ ಹೀಗಿದೆ ನೋಡಿ

Krishnaveni K

ಶನಿವಾರ, 27 ಜುಲೈ 2024 (10:35 IST)
ಬೆಂಗಳೂರು: ಭಾರೀ ಮಳೆಯಿಂದಾಗಿ ಎಡಕುಮೇರಿ ಬಳಿ ಗುಡ್ಡ ಕುಸಿತವಾದ ಕಾರಣ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಮಾರ್ಗದ ನಡುವೆ ಸಂಚರಿಸುವ ರೈಲುಗಳು ಮಾರ್ಗ ಬದಲಾವಣೆ ಮಾಡಿಕೊಳ್ಳಲಿದೆ.

ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ರೈಲ್ವೇ ಹಳಿಗಳ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ ರೈಲು ಸಂಚಾರಕ್ಕೆ ನಿನ್ನೆ ಅಡ್ಡಿಯಾಗಿತ್ತು. ಇದರಿಂದಾಗಿ ಈ ಮಾರ್ಗದ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರನ್ನು ನಿನ್ನೆ ಬಸ್ ಮೂಲಕ ಗಮ್ಯ ಸ್ಥಾನಕ್ಕೆ ತಲುಪಿಸಲಾಯಿತು. ಇಂದೂ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಯಾವ ರೈಲುಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬ ವಿವರ ಇಲ್ಲಿದೆ.

 
1.ದಿನಾಂಕ26.07.2024ರಂದು ಹೊರಡುವ ರೈಲು ಸಂಖ್ಯೆ 06568 ಕಾರವಾರ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ರದ್ದುಪಡಿಸಲಾಗಿದೆ.

2.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16595 ಕ್ರಾ.ಸಂ.ರಾ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಕುಣಿಗಲ್,ಪಡೀಲು ಬೈಪಾಸ್ ಬದಲು ಯಶವಂತಪುರ, ಬಾನಸವಾಡಿ, ಜೋಲಾರ್ಪೇಟೆ ಕ್ಯಾಬಿನ್, ಸೇಲಂ, ಪೊದನೂರು, ಶೋರನೂರು, ಮಂಗಳೂರು ಜಂಕ್ಷನ್, ಸುರತ್ಕಲ್ ಮೂಲಕ ಓಡಲಿದೆ. .

3.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಹಾಸನ ಬದಲು ಸುಬ್ರಹ್ಮಣ್ಯ ರಸ್ತೆ, ಪಡೀಲ್, ಸುರತ್ಕಲ್, ಕಾರವಾರ, ಮಡಗಾಂವ್, ಕೂಲಂ, ಕ್ಯಾಸ್ಟಲ್ ರಾಕ್, ಲೊಂಡಾ, ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮೂಲಕ ಓಡಲಿದೆ..

4.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16586 ಮುರಡೇಶ್ವರ–ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಹಾಸನ,ಮೈಸೂರು ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ.

5.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16512 ಕಣ್ಣೂರು–ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕುಣಿಗಲ್ ಬದಲು ಮಂಗಳೂರು ಸೆಂಟ್ರಲ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ.

6. ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16596 ಕಾರವಾರ-ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಪಡೀಲು ಬೈಪಾಸ್ ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ.

7. ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ ಕುಣಿಗಲ್ ಬದಲು ಜೋಲಾರ್ಪೇಟೆ ಕ್ಯಾಬಿನ್, ಸೇಲಂ, ಶೋರನೂರು, ಮಂಗಳೂರು ಜಂಕ್ಷನ್ ಮೂಲಕ ಓಡಲಿದೆ.

8. ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರಡೇಶ್ವರ ಎಕ್ಸ್‌ಪ್ರೆಸ್ 26.07.2024 ರ ರಾತ್ರಿ ಹೊರಟಿರುವುದು KSR ಬೆಂಗಳೂರು, ಜೋಲಾರ್ಪೇಟೆ ಕ್ಯಾಬಿನ್, ಶೋರನೂರು, ಮಂಗಳೂರು ಜಂಕ್ಷನ್ ಮೂಲಕ ಓಡಲಿದೆ.

ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮರುನಿಗದಿಪಡಿಸಿ,ಸುರಕ್ಷಿತವಾಗಿ ಪ್ರಯಾಣವನ್ನು ಬೆಳೆಸಬೇಕೆಂದು ವಿನಂತಿಸುತ್ತೇವೆ.
ದಕ್ಷಿಣ ಕನ್ನಡ ಜಿಲ್ಲಾ ರೈಲು ಪ್ರಯಾಣಿಕರ ಬಳಕೆದಾರರ ಸಂಘ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ