ಏಸುವಿನ ಕರ್ತವ್ಯ ನಿರ್ವಹಿಸಿದೆ ಎಂದು ಶಿವಕುಮಾರ ಸ್ವಾಮೀಜಿ ಪುತ್ಥಳಿ ವಿರೂಪಗಳಿಸಿದವ ಅರೆಸ್ಟ್

Krishnaveni K

ಶುಕ್ರವಾರ, 6 ಡಿಸೆಂಬರ್ 2024 (10:25 IST)
ಬೆಂಗಳೂರು: ಏಸುವಿನ ಕರ್ತವ್ಯ ನಿರ್ವಹಿಸಿದೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಗಳ ಪುತ್ಥಳಿಯನ್ನು ವಿರೂಪಗೊಳಿಸಿದ ಫುಡ್ ಡೆಲಿವರಿ ಬಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಸಮೀಪದ ಭರತನಗರ ನಿವಾಸಿ ಶಿವಕೃಷ್ಣ ಎಂಬ 34 ವರ್ಷದ ಯುವಕ ಬಂಧಿತ. ಆರೋಪಿ ನವಂಬರ್ 30 ರಂದು ಮಧ್ಯರಾತ್ರಿ ಗಿರಿನಗರದ ವೀರಭದ್ರನಗರದ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿದ್ದ ಶಿವಕುಮಾರಸ್ವಾಮೀಜಿಗಳ ಪುತ್ಥಳಿ ವಿರೂಪಗೊಳಿಸಿದ್ದಾನೆ.

5 ವರ್ಷಗಳ ಹಿಂದೆ ಈ ಪ್ರತಿಮೆ ನಿರ್ಮಿಸಲಾಗಿತ್ತು. ಇದನ್ನು ಜಯಕರ್ನಾಟಕ ಸಂಘಟನೆ ನಿರ್ವಹಿಸುತ್ತಿದೆ. ಕ್ರೈಸ್ತ ಧರ್ಮದ ಪ್ರಭಾವದಿಂದ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಆರೋಪಿ ಅವಿವಾಹಿತ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಹಿಂದೂ ಧರ್ಮದ ಮೇಲೆ ಧ್ವೇಷ ಕಾರುತ್ತಿದ್ದ.

ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಕ್ಯೂ ಆರ್ ಕೋಡ್ ಇರುವ ಭಿತ್ತಿಪತ್ರ ಹಂಚುತ್ತಿದ್ದ. ಇದನ್ನು ಸ್ಕ್ಯಾನ್ ಮಾಡಿದರೆ ಬೈಬಲ್ ಸಿಗುತ್ತಿತ್ತು. ವಿಚಾರಣೆ ವೇಳೆ ಕನಸಿನಲ್ಲಿ ಏಸು ಬಂದು ಕೃತ್ಯ ಎಸಗುವಂತೆ ಹೇಳಿದ್ದ. ಅದಕ್ಕೇ ಏಸುವಿನ ಕರ್ತವ್ಯ ನಿರ್ವಹಿಸಿದ್ದೆ ಎಂದಿದ್ದಾನೆ. ಏಳು ವರ್ಷಗಳ ಹಿಂದೆಯೇ ಈತ ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದು ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಸುತ್ತಿಗೆಯೊಂದಿಗೆ ಬಂದಿದ್ದ ಈತ ಪುತ್ಥಳಿ ಒಡೆಯಲು ಪ್ರಯತ್ನಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ